ಮಾ. 27 ರಿಂದ 29ರ ವರೆಗೆ ಕುಂಟಾಡಿ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ “ಗಡುವಾಡು ನೇಮ”

ಕಾರ್ಕಳ: ಕುಂಟಾಡಿ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ 60 ವರ್ಷಕ್ಕೊಮ್ಮೆ ನಡೆಯುವ ಗಡುವಾಡು ನೇಮವು ಮಾ.27 ರಿಂದ 29 ರ ವರೆಗೆ ಬಂಜಿನಡ್ಕ ತಾವಿನಲ್ಲಿ ನಡೆಯಲಿದೆ. ಗ್ರಾಮದ ದೈವಗಳಾದ ಶ್ರೀ ರಕ್ತೇಶ್ವರಿ ಮತ್ತು ವ್ಯಾಘ್ರಚಾಮುಂಡಿ ದೈವಗಳ 60 ವರ್ಷಕ್ಕೊಮ್ಮೆ ನಡೆಯುವ ಗೆಡುವಾಡು ನೇಮ ಇದಾಗಿದ್ದು, ಧಾರ್ಮಿಕ ಕಾರ್ಯವನ್ನು ಪುತ್ತೂರು ಶ್ರೀನಿವಾಸ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿದೆ. ಮಾ. 27 ರಂದು 11.30 ಕ್ಕೆ ಕಲಶಾಭಿಷೇಕ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, 12:30 ಕ್ಕೆ ನಂದಿಗೋಣ ನೇಮ ನಡೆಯಲಿದೆ. ಬೆರ್ಮನಬೆಟ್ಟು […]