ವಿಜ್ಞಾನಿಗಳಿಂದ ಎಚ್ಚರಿಕೆ ಅಂಟಾರ್ಕ್ಟಿಕಾದಲ್ಲಿ ಶಾಖದ ಅಲೆ, ಕರಗುತ್ತಿರುವ ಹಿಮಗಡ್ಡೆಗಳು
ಲಂಡನ್ : ಅಂಟಾರ್ಕ್ಟಿಕಾದಲ್ಲಿ ಸಮುದ್ರದ ಶಾಖದ ಅಲೆಗಳು ಉಂಟಾಗುವುದು ಮತ್ತು ಮಂಜುಗಡ್ಡೆ ಕರಗುವಿಕೆಯಂಥ ವಿಕೋಪದ ಸಾಧ್ಯತೆಗಳು ಹೆಚ್ಚು ಸಾಮಾನ್ಯ ಮತ್ತು ಹೆಚ್ಚು ತೀವ್ರವಾಗಲಿವೆ ಎಂದು ಸಂಶೋಧಕರು ಹೇಳಿದ್ದಾರೆ. ಜಾಗತಿಕ ತಾಪಮಾನ ಏರಿಕೆಯನ್ನು ಪ್ಯಾರಿಸ್ ಒಪ್ಪಂದದ ಗುರಿಯಾದ 1.5 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸಲು ಈಗ ಕಠಿಣ ಕ್ರಮದ ಅಗತ್ಯ ಎಂದು ಹೇಳಿರುವ ವಿಜ್ಞಾನಿಗಳು, ಹಿಮಗಡ್ಡೆಗಳ ಕರಗುವಿಕೆಯು ಭಾರಿ ವಿಕೋಪದ ಮುನ್ಸೂಚನೆಯಾಗಿರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.ಹವಾಮಾನ ಬದಲಾವಣೆಗಳ ಕಾರಣದಿಂದ ಅಂಟಾರ್ಕ್ಟಿಕಾದಲ್ಲಿ ಉಷ್ಣದ ಅಲೆಗಳು ಏಳುತ್ತಿದ್ದು, ಹಿಮಗಡ್ಡೆಗಳು ತೀವ್ರವಾಗಿ ಕರಗುತ್ತಿವೆ […]