ಲಾಕ್ ಡೌನ್ ನಡುವೆ ಸಪ್ತಪದಿ ಕಹಾನಿ: ಸರಳವಾಗಿ ಮದ್ವೆಯಾಗಿ, ಕಾರ್ಮಿಕರಿಗೆ ಹೊಟ್ಟೆ ತುಂಬಾ ಊಟ ಹಾಕಿದ್ರು ಈ ನವದಂಪತಿ!
ಉಡುಪಿ : ದೇಶದಾದ್ಯಂತ ಕೊರೊನ ಲಾಕ್ ಡೌನ್ ಮುಂದುವರಿದಿದ್ದರೆ ಇಲ್ಲೊಂದು ಅಪರೂಪದ ಮದುವೆ ನಡೆದಿದೆ . ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಸಂದೇಶ್ ಶೆಟ್ಟಿ ಹಾಗೂ ಬೆಳ್ತಂಗಡಿಯ ರಕ್ಷಿತಾ ಅವರ ವಿವಾಹವು ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಕಣಂಜಾರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವ ನಿಗದಿತ ದಿನಾಂಕ ಎ. 12 ರಂದು ನಡೆಯಿತು. ಆದರೆ ಮದುವೆ ಊಟ ಸವಿದಿದ್ದು ಬರೊಬ್ಬರಿ ನಾಲ್ಕುನೂರು ಹೆಚ್ಚು ಜನ, ಕೊರೊನದ ಲಾಕ್ಡೌನ್ ನಡುವೆ ಹಸಿದಿರುವ ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಕೆಲಸಗಾರರು, ರಸ್ತೆ […]