ಕಾರ್ಕಳ ಪುರಸಭೆ: ನಿರುದ್ಯೋಗಿ ಯುವಕ–ಯುವತಿಯರಿಗೆ ಸ್ವ ಉದ್ಯೋಗಕ್ಕಾಗಿ ಸಾಲ ಸೌಲಭ್ಯ
ಉಡುಪಿ: ಕಾರ್ಕಳ ಪುರಸಭೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ದೀನ ದಯಾಳ್ ಅಂತ್ಯೋದಯ ಯೋಜನೆಯ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ನಿರುದ್ಯೋಗಿ ಯುವಕ–ಯುವತಿಯರು ಸ್ವಯಂ-ಉದ್ಯೋಗ ಕೈಗೊಳ್ಳಲು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿದರದಲ್ಲಿ 2 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಮಹಿಳಾ ಉಳಿತಾಯ ಗುಂಪುಗಳ ರಚನೆ, ಈಗಾಗಲೇ ರಚಿಸಲಾಗಿರುವ ಮಹಿಳಾ ಉಳಿತಾಯ ಗುಂಪುಗಳಿಗೆ ಬ್ಯಾಂಕ್ ಲಿಂಕೇಜ್, ಉಳಿತಾಯ ಗುಂಪುಗಳ ಮಹಿಳೆಯರಿಗೆ ಆಹಾರ […]
ಸಾಲ ವಾಪಸು ಕೇಳಿದ್ದಕ್ಕೆ ಕೊಲೆ ಬೆದರಿಕೆ
ಉಡುಪಿ: ವ್ಯವಹಾರಕ್ಕೆ ನೀಡಿರುವ ಸಾಲವನ್ನು ವಾಪಸು ಕೇಳಿದ್ದಕ್ಕೆ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವ ಘಟನೆ ಉಡುಪಿ ತಾಲೂಕಿನ ಬ್ರಹ್ಮಗಿರಿಯಲ್ಲಿ ನಡೆದಿದೆ. ಈ ಬಗ್ಗೆ ಬ್ರಹ್ಮಗಿರಿ ನಾಯರ್ಕೆರೆ ನಿವಾಸಿ 70 ವರ್ಷದ ಪ್ರೇಮಾನಂದ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಇವವರಿಗೆ ಪರಿಚಯಸ್ಥನಾಗಿದ್ದ ಸ್ಯಾಮುವೆಲ್ ರಿಜೋಯ್ ಆನಂದ ಯಾನೆ ಸ್ಯಾಮುವೆಲ್ ಡಿ’ಸೋಜ ವಂಚನೆ ಎಸಗಿರುವ ಆರೋಪಿ. ಪ್ರೇಮಾನಂದ ಅವರು 2019ರಲ್ಲಿ ಆರೋಪಿಗೆ ವ್ಯವಹಾರದ ಉದ್ದೇಶಕ್ಕೆ 3.50 ಲಕ್ಷ ರೂ. ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿದ್ದರು. ಹಣವನ್ನು […]
ಸಾಲಮನ್ನಾ: ರೈತರಿಗೆ ಮಾಹಿತಿ ನೀಡಲು ಐವನ್ ಸೂಚನೆ, ಉಡುಪಿ ಜಿಲ್ಲೆಗೆ ರೂ. 77.72 ಕೋಟಿ ಸಾಲಮನ್ನಾ ಮೊತ್ತ ಬಿಡುಗಡೆ
ಉಡುಪಿ, ಜೂನ್: ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯಡಿ ಜಿಲ್ಲೆಯಲ್ಲಿ ರೈತರ ಖಾತೆಗೆ ಬಿಡುಗಡೆಯಾದ ಮೊತ್ತದ ಬಗ್ಗೆ ಪ್ರತಿಯೊಬ್ಬ ರೈತನಿಗೂ ಸಮರ್ಪಕ ಮಾಹಿತಿ ನೀಡುವಂತೆ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಅಧಿಕಾರಿಗಳ ಸಭೆ ನಡೆಸಿ ಹಾಗೂ ಸಾರ್ವಜನಿಕರ ಕುಂದುಕೊರತೆ ಸ್ವೀಕರಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ 4720 ಖಾತೆಗಳು ಹಾಗೂ ಸಹಕಾರ ಸಂಘಗಳಲ್ಲಿ 24232 ರೈತರ ಖಾತೆಗಳು ಸಾಲಮನ್ನಾಗೊಳಿಸಲು ಅರ್ಹತೆ ಪಡೆದಿವೆ. […]