ಮಳೆಗಾಲದಲ್ಲೇ ಶುರುವಾಯ್ತು ನೀರಿಗೆ ಬರ:ಇನ್ನು ಬೇಸಿಗೆ ಕತೆ ಏನು?

ರಾಜ್ಯ: ಮಳೆಗಾಲದಲ್ಲಿಯೇ ರಾಜ್ಯದ ವಿವಿದೆಡೆ ನೀರಿನ ಸಮಸ್ಯೆ ಉದ್ಭವಿಸಿದೆ. ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ರಾಜ್ಯದ ಬಹುತೇಕ ಕೆರೆ, ನದಿಗಳು ತುಂಬಿಲ್ಲ. ಶೇ.70ರಷ್ಟುಕೆರೆಗಳು  ನೀರಿಲ್ಲದೇ ಕಂಗಾಲಾಗಿ ಕೂತಂತಿದೆ.  ರಾಜ್ಯದ 25 ಜಿಲ್ಲೆಗಳ 1,323 ಗ್ರಾಮಗಳಿಗೆ ನಿತ್ಯ 2,237 ಟ್ಯಾಂಕರ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು ಮಳೆಗಾಲದಲ್ಲಿಯೇ ಈ ರೀತಿ ನೀರಿಗೆ ಬರ ಬಂದರೆ ಬೇಸಿಗೆಯ ಪರಿಸ್ಥಿತಿ ಹೇಗಿರಬಹುದೆನ್ನುವ ಚಿತ್ರಣ ಈಗಾಗಲೇ ಭಯ ಹುಟ್ಟಿಸಿದೆ. ಈಗಲೇ ಹೀಗಾದರೆ? ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು […]