ಕಾನೂನು ನೆರವಿನ ಅರಿವು ಮೂಡಿಸುವುದು ವಕೀಲರ ಕರ್ತವ್ಯ- ಸಿ.ಎಂ. ಜೋಶಿ

ಉಡುಪಿ: ದೇಶದಲ್ಲಿ ಶೇಕಡ 80 ರಷ್ಟು ಜನರು ಉಚಿತ ಕಾನೂನು ಸಹಾಯ ಪಡೆಯುವ ಆರ್ಹತೆ ಹೊಂದಿದ್ದರೂ, ಮಾಹಿತಿಯ ಕೊರತೆಯಿಂದಾಗಿ ನ್ಯಾಯಾಲಯದ ಬಾಗಿಲು ತಟ್ಟುವವರ ಸಂಖ್ಯೆ ಅತ್ಯಲ್ಪ. ಜನ ಸಾಮಾನ್ಯರಿಗಾಗಿ ಸಂವಿಧಾನದಿಂದ ಕಡ್ಡಾಯವಾಗಿ ಕೊಡಮಾಡಲ್ಪಟ್ಟಿರುವ ಉಚಿತ ಕಾನೂನು ನೆರವಿನ ಬಗ್ಗೆ ತಿಳಿಸುವುದು ಪ್ಯಾನಲ್ ವಕೀಲರ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ. ಜೋಶಿ ಹೇಳಿದರು. ಅವರು ಶುಕ್ರವಾರ ಆಯೋಜಿಸಲಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು […]