ಮಣಿಪಾಲ: ಕ್ರಿಸ್ಮಸ್ ಕೇಕ್ ತಯಾರಿಕೆಗೆ ಮಿಕ್ಸಿಂಗ್ ಕಾರ್ಯ
ಉಡುಪಿ: ಮಣಿಪಾಲದ ವೆಲ್ಕಮ್ ಗ್ರೂಪ್ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ (ವಾಗ್ಶಾ) ವತಿಯಿಂದ ಮುಂಬರುವ ಕ್ರಿಸ್ಮಸ್ ಹಬ್ಬಕ್ಕಾಗಿ ಸಾಂಪ್ರದಾಯಿಕ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ನಡೆಯಿತು. ವಾಗ್ಶಾ ವಿದ್ಯಾರ್ಥಿಗಳ ತರಬೇತಿಯ ‘ಲವಣ ರೆಸ್ಟೋರೆಂಟ್’ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಮಾಹೆ ತಂಡ, ಪೈ ಕುಟುಂಬ, ಆಡಳಿತ ಮುಖ್ಯಸ್ಥರು, ಸ್ಥಳೀಯ ಗಣ್ಯರು ಪ್ರತಿವರ್ಷ ಕ್ರಿಸ್ಮಸ್ಗೆ ಒಂದು ತಿಂಗಳು ಮೊದಲೇ ನಡೆಯುವ ಸಾಂಪ್ರದಾಯಿಕ ಕ್ರಿಸ್ಮಸ್ ಕೇಕ್ಮಿಕ್ಸ್ನಲ್ಲಿ ಭಾಗಿಯಾದರು. ಭಾಗವಹಿಸಿದ ಎಲ್ಲರೂ ಬಾಣಸಿಗ ಟೊಪ್ಪಿ ಹಾಗೂ ಆಫ್ರಾನ್ ಧರಿಸಿ ಒಣದ್ರಾಕ್ಷಿ, […]