ಕರಾವಳಿ ಯೂತ್ ಕ್ಲಬ್ ಮನವಿಗೆ ಜಿಲ್ಲಾಧಿಕಾರಿಯಿಂದ ಸ್ಪಂದನೆ
ಉಡುಪಿ: ಕೊರೊನಾ ಸಂಕಷ್ಟದಿಂದಾಗಿ ಜಿಲ್ಲೆಯಲ್ಲಿ ಅತಂತ್ರರಾಗಿರುವ ಒಬ್ಬಂಟಿ ರೋಗಿಗಳು ಹಾಗೂ ಅನಾರೋಗ್ಯ ಪೀಡಿತರ ರಕ್ಷಣೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಕರಾವಳಿ ಯೂತ್ ಕ್ಲಬ್ ಉಡುಪಿ ವತಿಯಿಂದ ಆಗಸ್ಟ್ 13ರಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಜಿಲ್ಲಾಧಿಕಾರಿಯವರ ಆದೇಶದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕಚೇರಿಗೆ ಪತ್ರ ಬರೆದಿದ್ದು, ಅನಾರೋಗ್ಯ ಪೀಡಿತರಿಗೆ ಅಗತ್ಯ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ. ಸಂಕಷ್ಟದಲ್ಲಿರುವ ಅನಾರೋಗ್ಯ ಪೀಡಿತರು ಸಹಾಯಕ್ಕಾಗಿ ಆರೋಗ್ಯ ಇಲಾಖೆಯ ಕಾಲ್ […]