ಮುಂಗಾರು ಮಳೆಗೆ ಮಂಗಳೂರು ರೆಡಿ; ಎಲ್ಲಾ ತುರ್ತು ಸೇವೆಗಳನ್ನು ನಿಭಾಯಿಸಲು ಸಿದ್ದವಾದ ಜಿಲ್ಲಾಡಳಿತ

ಮಂಗಳೂರು: ಮುಂಗಾರು ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ, ಭಾರೀ ಮಳೆಯಿಂದ ಸಂಭವಿಸಬಹುದಾದ ಹಾನಿಯನ್ನು ತಡೆಯಲು ಮಂಗಳೂರು ಜಿಲ್ಲಾಡಳಿತ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದೆ. ಈ ಬಾರಿ ವಿಕೇಂದ್ರೀಕೃತ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರತಿಯೊಂದು ಗ್ರಾಮ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಇನ್ಸಿಡೆಂಟ್ ಕಮಾಂಡರ್‌ಗಳನ್ನು ನೇಮಕ ಮಾಡಲಾಗಿದೆ. ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ರೂ. 30,000 ಅನುದಾನವನ್ನು ಮೀಸಲಿಡಲಾಗಿದೆ. ಭೂಕುಸಿತ, ಮನೆಗಳಿಗೆ ನೀರು ನುಗ್ಗುವುದು, ಮರಗಳು […]
ಸುಳ್ಯ: ಇಂಟರ್ನೆಟ್ ಸೇವೆ ವ್ಯತ್ಯಯ – ಗ್ರಾಹಕನಿಗೆ ₹30,000 ಪರಿಹಾರಕ್ಕೆ ಕೋರ್ಟ್ ಆದೇಶ

ಸುಳ್ಯ: ಇಂಟರ್ನೆಟ್ ಸೇವೆ ವ್ಯತ್ಯಯಗೊಂಡ ಪ್ರಕರಣದಲ್ಲಿ ಗ್ರಾಹಕರ ಪರವಾಗಿ ಮಹತ್ವದ ತೀರ್ಪು ಹೊರಬಿದ್ದಿದ್ದು, Bharat Sanchar Nigam Limited (ಬಿಎಸ್‌ಎನ್‌ಎಲ್) ಸಂಸ್ಥೆಗೆ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ಪುಚ್ಚಪ್ಪಾಡಿ ಗ್ರಾಮದ ನಿವಾಸಿ ಹರಿಸುಬ್ರಹ್ಮಣ್ಯ ಅವರು 2019ರ ಫೆಬ್ರವರಿಯಿಂದ ಬಿಎಸ್‌ಎನ್‌ಎಲ್ ಏರ್ ಫೈಬರ್ ಸಂಪರ್ಕವನ್ನು ಬಳಸುತ್ತಾ ಪ್ರತಿ ತಿಂಗಳು ₹589 ಶುಲ್ಕ ಪಾವತಿಸುತ್ತಿದ್ದರು. ಆದರೆ 2024ರ ಡಿಸೆಂಬರ್ 26ರಿಂದ ಇಂಟರ್ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಈ ಕುರಿತು ಅವರು ಸ್ಥಳೀಯ ಕಚೇರಿ ಹಾಗೂ ಗ್ರಾಹಕ ಸೇವಾ ಕೇಂದ್ರಕ್ಕೆ […]
UPSC/KAS/CA ಆಕಾಂಕ್ಷಿಗಳಿಗೆ ಸುವರ್ಣಾವಕಾಶ: 3 ವರ್ಷ ಊಟ-ವಸತಿಯೊಂದಿಗೆ ಉಚಿತ ಕೋಚಿಂಗ್!

ಬೆಂಗಳೂರು: ಎಷ್ಟೋ ವಿದ್ಯಾರ್ಥಿಗಳಿಗೆ, ಯುವಕರಿಗೆ ನಾನೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕು ಅನ್ನೋ ಕನಸು ಸಾಮಾನ್ಯವಾಗಿರುತ್ತದೆ. ಆದರೆ ಕುಟುಂಬ, ಆರ್ಥಿಕ ಪರಿಸ್ಥಿತಿ ಇದಕ್ಕೆ ಪೂರಕವಾಗಿರುವುದಿಲ್ಲ. ಈ ದೃಷ್ಟಿಯಲ್ಲಿ ಕರ್ನಾಟಕದ ಬಡ ಹೆಣ್ಣುಮಕ್ಕಳಿಗೆಂದೇ ಸ್ಪರ್ಶ ಟ್ರಸ್ಟ್ UPSC, KAS ಹಾಗೂ CA ತರಬೇತಿ ಪಡೆಯಲು ಅಪರೂಪದ ಅವಕಾಶ ಒದಗಿಸಿದೆ. “ಯುವಿಕಾ” ಯೋಜನೆಯಡಿ 3 ವರ್ಷಗಳ ಕಾಲ ಸಂಪೂರ್ಣ ಉಚಿತ ಕೋಚಿಂಗ್, ಊಟ ಮತ್ತು ವಸತಿ ಸೌಲಭ್ಯ ನೀಡಲಾಗುತ್ತಿದೆ. ಇವರಿಗಿದೆ ಅವಕಾಶ ಈ ಯೋಜನೆ ಹೆಣ್ಣುಮಕ್ಕಳಿಗೆ ಮಾತ್ರ ಲಭ್ಯವಿದ್ದು, 21 – […]
ಎಲ್‌ಪಿಜಿ ಸಿಲಿಂಡರ್ ಬೆಲೆ 993 ರೂ. ಏರಿಕೆ! ಇಂದಿನಿಂದಲೇ ಜಾರಿ

ನವದೆಹಲಿ: ಇರಾನ್, ಇಸ್ರೇಲ್, ಅಮೇರಿಕಾ ದೇಶಗಳ ಯುದ್ಧ ಪರಿಸ್ಥಿತಿ ಹಾಗೂ ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಎಲ್.ಪಿ.ಜಿ. ಕೊರತೆ ಉಂಟಾಗಿದೆ. ಇದೀಗ ದೇಶಾದ್ಯಂತ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಜಾರಿಯಾಗಿದೆ. ಇಂದಿನಿಂದಲೇ (ಮೇ 1) ಅನ್ವಯವಾಗುವಂತೆ, ಪ್ರತಿ ಸಿಲಿಂಡರ್‌ಗೆ ₹993 ಹೆಚ್ಚಳ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಏರಿಕೆಯ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ ₹3,071.50ಕ್ಕೆ ತಲುಪಿದೆ. ಈ ಬೆಲೆ ಏರಿಕೆ ಹೋಟೆಲ್, ರೆಸ್ಟೋರೆಂಟ್ ಹಾಗೂ ಇತರ ವಾಣಿಜ್ಯ […]
ಮೇ 4ರಿಂದ ಕುಡಿಯುವ ನೀರಿನ ರೇಶನಿಂಗ್ – 2 ದಿನಗಳಿಗೊಮ್ಮೆ ನೀರು ಪೂರೈಕೆ

ಮಂಗಳೂರು: ತೀವ್ರ ಬೇಸಿಗೆ ಹಿನ್ನೆಲೆ ನೇತ್ರಾವತಿ ನದಿಯ ಒಳಹರಿವು ಬಹುತೇಕ ನಿಂತುಹೋಗಿದ್ದು, ತುಂಬೆ ಕಿಂಡಿ ಅಣೆಕಟ್ಟುಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಮೇ 4ರಿಂದ ಕುಡಿಯುವ ನೀರಿನ ರೇಶನಿಂಗ್ ಜಾರಿಗೆ ತರಲು ನಿರ್ಧರಿಸಿದೆ. ಈ ಹೊಸ ಕ್ರಮದಂತೆ, ಮಂಗಳೂರು ಉತ್ತರ ಹಾಗೂ ದಕ್ಷಿಣ ಭಾಗಗಳಿಗೆ ಪ್ರತಿ ಎರಡು ದಿನಗಳಿಗೊಮ್ಮೆ (alternate days) ನೀರು ಸರಬರಾಜು ಮಾಡಲಾಗುತ್ತದೆ. ಮುಂದಿನ ಸೂಚನೆ ಬರುವವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ. ಮೇ 4ರಂದು ನೀರು […]