ಚೆಸ್ ಪಂದ್ಯಾಟ: ಎಕ್ಸಲೆಂಟ್ ಪಿಯು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಕುಂದಾಪುರ: 2022-23ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯು ಅಕ್ಟೋಬರ್ 7 ಮತ್ತು 8 ರಂದು ಶ್ರೀ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಬಿಡದಿ ರಾಮನಗರ ಜಿಲ್ಲೆಯಲ್ಲಿ ನಡೆದಿದ್ದು, ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಮಾನಸ ದೇವಾಡಿಗ ಮತ್ತು ನಿಹಾಲ್ ಎನ್ ಶೆಟ್ಟಿ ಉಡುಪಿ ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ ದ್ವಿತೀಯ ಹಾಗೂ ಚತುರ್ಥ ಸ್ಥಾನಿ ವಿಜೇತರಾಗಿ, ಓಡಿಸ್ಸಾ ರಾಜ್ಯದ […]
ಕುಸ್ತಿ ಪಂದ್ಯಾಟ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಹೆಮ್ಮಾಡಿ: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಭಂಡಾರ್‌ಕಾರ್ಸ್ ಪದವಿಪೂರ್ವ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 61 ಕೆ.ಜಿ ವಿಭಾಗದಲ್ಲಿ ನಿಶ್ಚಲ್ ಫಿಲಿಪ್ ಬೆಳ್ಳಿ ಪದಕ, 65 ಕೆ.ಜಿ ವಿಭಾಗದಲ್ಲಿ ಕ್ರಮವಾಗಿ ಅನುಲ್ ಚಿನ್ನದ ಪದಕ ಹಾಗೂ ಡೆನ್ಜಿಲ್ ಡಯಸ್ ಬೆಳ್ಳಿಯ ಪದಕ, 70ಕೆ.ಜಿ ಮೇಲ್ಪಟ್ಟ ವಿಭಾಗದಲ್ಲಿ ಸೂರಜ್ ಡಯಾಸ್ ಕಂಚಿನ ಪದಕ, 79 ಕೆ.ಜಿ.ವಿಭಾಗದಲ್ಲಿ ಶ್ರೀನಿಧಿ ಶೆಟ್ಟಿ ಚಿನ್ನದ […]
ಅಕ್ಟೋಬರ್ 11 ರಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಉಡುಪಿ: ಅಕ್ಟೋಬರ್ 11 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110ಕೆವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಮುಂಡ್ಲಿ ಫೀಡರ್‌ನಲ್ಲಿ ಲೈನಿನ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಮುಂಡ್ಲಿ, ದುರ್ಗ, ತೆಳ್ಳಾರ್, ಪೊಲ್ಲಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಉಡುಪಿ ನಿಟ್ಟೂರಿನಲ್ಲಿರುವ 1*10 ಎಂ.ವಿ.ಎ, 110/11ಕೆವಿ ಪರಿವರ್ತಕವನ್ನು 1*20 ಎಂ.ವಿ.ಎ ಗೆ ಉನ್ನತೀಕರಿಸುವ […]
ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಭಂಡಾರಕಾರ್ಸ್ ಪದವಿಪೂರ್ವ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದರ್ಶನ್ 61 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ, ಆತ್ಮಕ್ 97 ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಬೆಳ್ಳಿ ಪದಕ, ಆಶ್ರಯ 97 ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಕಂಚಿನ ಪದಕ, ಸಮರ್ಥ 74 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಿರುತ್ತಾರೆ. ಈ ಮೂಲಕ ಜಿಲ್ಲಾ […]
ಲೇಖಕಿ ಡಾ. ರೇಖಾ ವಿ ಬನ್ನಾಡಿಗೆ ಮಾತೃ ವಿಯೋಗ

ಕುಂದಾಪುರ: ಲೇಖಕಿ ಡಾ.ರೇಖಾ ವಿ. ಬನ್ನಾಡಿಯವರ ತಾಯಿ, ಕಂದಾವರ ಕೊಂಗವಳ್ಳಿ ಮನೆ ದಿ. ಶಂಕರ ಶೆಟ್ಟರ ಪತ್ನಿ ಗುಳ್ವಾಡಿ ದೊಡ್ಡಮನೆ ರಾಜೀವಿ ಶೆಡ್ತಿಯವರು(85 ವರುಷ) ಸೆ. 30 ರಂದು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ. ಅವರು ಮಗ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.