ಮಂದಾರ್ತಿ: ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ

ಮಂದಾರ್ತಿ: ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ವಿ. ಪ್ರಾ. ಸ. ಸಂಘವು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದ್ದು, ಮೀನುಗಾರರ ಸಹಕಾರಿ ಸಂಘವು ಮಾದರಿ ಆರ್ಥಿಕ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ನಾಡೋಜ ಡಾ.ಜಿ.ಶಂಕರ್ ಹೇಳಿದರು. ಅವರು ಶುಕ್ರವಾರ ಮಂದಾರ್ತಿ ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ವಿವಿಧೋದ್ದೇಶ ಪ್ರಾಥಮಿಕ ಸಹಕಾರಿ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಸಂಘದ ಭದ್ರತಾ ಕೊಠಡಿಯನ್ನು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಧನಂಜಯ ಶೆಟ್ಟಿ ಹಾಗೂ ಕಂಪ್ಯೂಟರ್ ಅನ್ನು ‌ ಉದ್ಯಮಿ ಗಣೇಶ್ ಪ್ರಸಾದ್‌ ಕಾಂಚನ್ […]

ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅಮೋಘ ಪ್ರದರ್ಶನ: ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಪ್ರತಿ ಹೆಜ್ಜೆಯಲ್ಲೂ ಹೊಸತನ ಸಾಧಿಸುವುದರ ಮೂಲಕ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಅವಕಾಶ ಕಲ್ಪಿಸಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸಿನ ಪಯಣದಲ್ಲಿ ಸಾಗಿ ಮುನ್ನೆಡೆಯಬೇಕು ಎನ್ನುವ ಸದುದ್ದೇಶವನ್ನು ಹೊಂದಿರುವ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ಶೈಕ್ಷಣಿಕ ಸಾಧನೆಯ ಶಿಖರವನ್ನು ಏರುವುದರ ಜೊತೆಗೆ ಇದೀಗ ಕ್ರೀಡಾಕ್ಷೇತ್ರದಲ್ಲಿಯೂ ಅದ್ಭುತ ಸಾಧನೆಗೈದಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪ್ರಜ್ವಲ್( ಕರಾಟೆ ), ಮನೀಶ್, ಪ್ರಖ್ಯಾತ್ (ಟೆನ್ನಿಕ್ವಾಯಿಟ್ ), ಶ್ರವಣ್ ( ಫುಟ್ಬಾಲ್ ), […]

ಸಾಲಿಗ್ರಾಮ: ಅ. 15 ರಂದು ಕಾರಂತರ ಸಂಸ್ಮರಣೆ ಹಾಗೂ ಕಾರಂತ ಪುರಸ್ಕಾರ ಸಮಾರಂಭ

ಸಾಲಿಗ್ರಾಮ: ಗೆಳೆಯರ ಬಳಗದ ವತಿಯಿಂದ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಅಂಗವಾಗಿ ಅ.15 ರಂದು ಸಂಜೆ 6 ಗಂಟೆಗೆ ಕಾರ್ಕಡದ ಗಿರಿಜಾ ಕಲ್ಯಾಣ ಮಂತಪದಲ್ಲಿ ಕಾರಂತರ ಸಂಸ್ಮರಣೆ ಹಾಗೂ ಕಾರಂತ ಪುರಸ್ಕಾರ ಸಮಾರಂಭ ಜರುಗಲಿದ್ದು, ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರು ವಹಿಸಿಕೊಳ್ಳಲಿದ್ದಾರೆ. ಹಿರಿಯ ಪತ್ರಕರ್ತ ಮೊಗೇರಿ ಜಯರಾಮ ಅಡಿಗ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಡಿ. ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತ ಡಾ. […]

ಕೋಟೇಶ್ವರ: ನಿರುಪಯುಕ್ತ ನೀರಿನ ಟ್ಯಾಂಕ್ ತೆರವು

ಕುಂದಾಪುರ: ಕೋಟೇಶ್ವರ ಗ್ರಾಪಂ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಳೆದ ಹದಿನೈದು ವರ್ಷಗಳಿಂದ ನಿರುಪಯುಕ್ತವಾಗಿದ್ದ ನೀರಿನ ಟ್ಯಾಂಕ್‌ ಅನ್ನು ತೆರವುಗೊಳಿಸುವ ಕಾರ್ಯಾಚರಣೆ ಮಂಗಳವಾರ ನಡೆಯಿತು. ಕೋಟೇಶ್ವರ ಗ್ರಾಪಂ ಎದುರಿನ ಗ್ರಾಮಲೆಕ್ಕಿಗರ ಕೊಠಡಿ ಹಿಂಭಾಗದಲ್ಲಿ 1986ರಲ್ಲಿ ನಿರ್ಮಾಣವಾದ 2 ಲಕ್ಷ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯದ ಹೆಡ್‌ಟ್ಯಾಂಕ್‌ನಲ್ಲಿ ಸೋರಿಕೆ ಕಂಡುಬಂದಿದ್ದರಿಂದ ಕಳೆದ ಹದಿನೈದು ವರ್ಷಗಳಿಂದ ಯಾವುದೇ ಉಪಯೋಗ ಇಲ್ಲದೆ ನಿರುಪಯುಕ್ತವಾಗಿತ್ತು. ಟ್ಯಾಂಕ್ ಶಿಥಿಲಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಪಂ ಕಟ್ಟಡ ಸಹಿತ ಇತರೆ ಅಂಗಡಿಗಳಿಗೆ ಅಪಾಯ ಆಹ್ವಾನಿಸುತ್ತಿತ್ತು. ಟ್ಯಾಂಕ್ […]

ಚಿತ್ರನಟ ರಮೇಶ್ ಅರವಿಂದ್ ಯೋಗಬನ ಭೇಟಿ

ಕುಂದಾಪುರ: ಕನ್ನಡದ ಹೆಸರಾಂತ ಚಲನಚಿತ್ರ ನಟ ನಿರ್ದೇಶಕ ರಮೇಶ್ ಅರವಿಂದ್ ರವರು ಮೂಡು ಗಿಳಿಯಾರಿನ ಯೋಗಬನದ ಸರ್ವಕ್ಷೇಮ ಆಸ್ಪತ್ರೆಗೆ ಆಗಮಿಸಿದ ಸಂದರ್ಭದಲ್ಲಿ ಡಿವೈನ್ ಪಾರ್ಕ್ ಮತ್ತು ಎಸ್ ಎಚ್ ಆರ್ ಎಫ್ ಸಂಸ್ಥೆಯ ವತಿಯಿಂದ ವೈದ್ಯಕೀಯ ಆಡಳಿತ ನಿರ್ದೇಶಕ ಡಾ. ವಿವೇಕ್ ಉಡುಪ ಮತ್ತು ಮುಖ್ಯ ವೈದ್ಯಾಧಿಕಾರಿ ಮಾನಸ ವಿವೇಕ ಉಡುಪ ಇವರು ಸನ್ಮಾನಿಸಿ ಅಭಿನಂದಿಸಿದರು.