ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕವಿಗೋಷ್ಠಿ

ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ನ.18 ರಂದು ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಗಣೇಶ ಮೊಗವೀರ್ ಇವರು ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿ ಸ್ವರಚಿಸಿ ವಾಚಿಸಿದ ಕವನಗಳನ್ನು ವಿಮರ್ಶಿಸಿ ವಿದ್ಯಾರ್ಥಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಭವಿಷ್ಯದಲ್ಲಿ ನೀವು ಯಾವುದೇ ಉನ್ನತ ಉದ್ಯೋಗ ಪಡೆದರೂ ಈ ನೆಲದ ಭಾಷೆಯ ಅಭಿಮಾನ ನಿಮಗಿರಲಿ ಹಾಗೂ ನಿಮ್ಮ ಬರವಣಿಗೆಯ ಸಾಮರ್ಥ್ಯ ಇನ್ನೂ ಹೆಚ್ಚಿಸಿ ಎಂದು […]

ಸಂವಿಧಾನದ ಆಶಯದ ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕ್ರೀಡೆ ಸಹಕಾರಿ: ಡಾ. ಅಶ್ವಥ್ ನಾರಾಯಣ್

ಉಡುಪಿ: ದೈಹಿಕ ಮತ್ತು ಮಾನಸಿಕ ಸಮಸ್ಯೆಗಳ ನಿವಾರಣೆ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಲು ಅಗತ್ಯವಿರುವ ಶಕ್ತಿಯನ್ನು ಕ್ರೀಡೆಯಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಡೆಯಬಹುದು. ಇಂತಹ ಚಟುಚಟಿಕೆಯಲ್ಲಿ ಭಾಗವಹಿಸುವ ಮೂಲಕ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕ್ರೀಡೆಯ ಮೂಲಕ ಸಮರ್ಥವಾಗಿ ನೀಡಬಹುದಾಗಿದ್ದು, ಸಂವಿಧಾನದ ಆಶಯಗಳಿಗೆ ಎಲ್ಲರೂ ಬದ್ದರಾಗಿರಬೇಕು ಎಂದು ರಾಜ್ಯದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ ಮತ್ತು ಬಿಟಿ ಹಾಗೂ ವಿಜ್ಞಾನ […]

ಎಕ್ಸಲೆಂಟ್ ಪ.ಪೂರ್ವ ಕಾಲೇಜಿನ ವಿದಾರ್ಥಿಗಳಿಗಾಗಿ ಕೈಗಾರಿಕಾ ಕೇಂದ್ರಗಳಿಗೆ ಭೇಟಿ ಕಾರ್ಯಕ್ರಮ

ಕುಂದಾಪುರ: ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಂಸ್ಥೆಯ ವೀಕ್ಷಣೆ ಹಾಗೂ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಏರ್ಪಡಿಸಲಾಯಿತು. ಉಡುಪಿ ಜಿಲ್ಲೆಯ ಉಪ್ಪೂರಿನ ಬಳಿ ಇರುವ ಕೆ.ಎಂ.ಎಫ್ ನಂದಿನಿ ಡೈರಿ ಸ್ಥಾವರಕ್ಕೆ ವಿದ್ಯಾರ್ಥಿಗಳು ಭೇಟಿ ಕೊಟ್ಟು ಹಾಲಿನ ಪಾಶ್ಚರೀಕರಣ ಮತ್ತು ಹಾಲನ್ನು ಪ್ಯಾಕೇಟುಗಳಲ್ಲಿ ಸಂಗ್ರಹಿಸುವ ವಿಧಾನಗಳ ಬಗ್ಗೆ ತಿಳಿದುಕೊಂಡರು. ಹಾಲಿನಿಂದ ತಯಾರಾಗುವ ವಿವಿಧ ತಿಂಡಿ-ತಿನಿಸುಗಳು, ಸಂಗ್ರಹಿಸುವ ವಿಧಾನಗಳು ಹಾಗೂ ವಿತರಣಾ ಕ್ರಮಗಳ ಬಗ್ಗೆ ಅರಿತುಕೊಂಡರು.   […]

ಶಂಕರನಾರಾಯಣ: ರಸ್ತೆ ಕಾಮಗಾರಿಗಾಗಿ ಮರಗಳ ತೆರವು; ಸಾರ್ವಜನಿಕ ಅಹವಾಲು ಸಭೆ

ಶಂಕರನಾರಾಯಣ: ಸೋಮೇಶ್ವರ-ಕೋಟೇಶ್ವರ ಜಿಲ್ಲಾ ಮುಖ್ಯ ರಸ್ತೆಯಲ್ಲಿರುವ ರಸ್ತೆ ಅಗಲೀಕರಣ ಕಾಮಗಾರಿಗೆ ಅಡಚಣೆಯಾಗುವ ಅಕೇಶಿಯಾ ಹಾಗೂ ಇತರೆ ಜಾತಿಯ 147 ಮರಗಳನ್ನು ಮತ್ತು ಕುಂದಾಪುರ ತಾಲೂಕು ಕೋಟ-ಗೋಳಿಯಂಗಡಿ ಹಾಗೂ ಬ್ರಹ್ಮಾವರ-ಜನ್ನಾಡಿ ರಸ್ತೆ ಅಗಲೀಕರಣ ಕಾಮಗಾರಿಗೆ ಅಡಚಣೆಯಾಗುವ ಒಟ್ಟು 123 ಮರಗಳನ್ನು ತೆರವುಗೊಳಿಸುವ ಹಿನ್ನೆಲೆ ನವೆಂಬರ್ 29 ರಂದು ಮಧ್ಯಾಹ್ನ 3 ಗಂಟೆಗೆ ಶಂಕರನಾರಾಯಣ ವಲಯ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ. ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಭೆಯಲ್ಲಿ ಹಾಜರಾಗಿ ಅಥವಾ ಸದ್ರಿ ದಿನಾಂಕದ ಒಳಗೆ ವೃಕ್ಷ […]

ಕೋಟ: ಸುಗಂಧಿ ಮಕ್ಕಳ ಚಲನಚಿತ್ರ ಪ್ರದರ್ಶನ ಸಪ್ತಾಹ

ಕೋಟ: ವಿವೇಕ ಬಾಲಕಿಯರ ಫ್ರೌಢಶಾಲೆಯ ಆವರಣದ ಸ್ವರ್ಣಭವನದಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರು ಅಂತರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕಾರಂತ ಜೀವನ ಪ್ರೇರಿತ ಮಕ್ಕಳ ಚಲನಚಿತ್ರ ಸುಗಂಧಿ ಇದರ ಉಚಿತ ಪ್ರದರ್ಶನ ಸಪ್ತಾಹ ಕಾರ್ಯಕ್ರಮವು ಸೋಮವಾರದಂದು ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಾಧನೆ ಮಾಡಿದ್ದಾರೆ ಎಂದರು. ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಸುಗಂಧಿ ಚಲನಚಿತ್ರವು ಕಲೆಯಲ್ಲಿನ ಮೌಢ್ಯವನ್ನು ಎತ್ತಿ ಹಿಡಿಯುವಂತಿದೆ. ಚಿತ್ರವು ಯಶಸ್ವಿಯಾಗಿ […]