ಕುಂದಾಪುರದ ಟ್ರೋಲ್ ಕಿಂಗ್ ವೈಕುಂಠ ತೀವ್ರ ಅಸ್ವಸ್ಥ!: ಜನರ ಮನಗೆದ್ದ ಬಿಂದಾಸ್ ಹಾಡುಗಾರ ಆಸ್ಪತ್ರೆಗೆ, ಜನರಿಂದ ಪ್ರಾರ್ಥನೆ

-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ತನ್ನ ವಿಭಿನ್ನ ಶೈಲಿಯ ಹಾಡುಗಾರಿಕೆ ಮೂಲಕ ಕುಂದಾಪುರದ ಜನರನ್ನು ರಂಜಿಸುತ್ತಿದ್ದ ರಾಕ್‌ಸ್ಟಾರ್ ಖ್ಯಾತಿಯ ಕುಂದಾಪುರದ ವೈಕುಂಠ ತೀವ್ರ ಅಸ್ವಸ್ಥಗೊಂಡ ಪರಿಣಾಮ ಬುಧವಾರ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಂಗಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ನೇರಂಬಳ್ಳಿ ನಿವಾಸಿ ವೈಕುಂಠ ಕಳೆದ ನಾಲ್ಕು ದಿನಗಳಿಂದ ಕುಂದಾಪುರದ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿರುವ ಪಶು ಆಸ್ಪತ್ರೆಯ ಆವರಣದಲ್ಲಿ ತೀವ್ರ ಅಸ್ವಸ್ಥಗೊಂಡು ಮಲಗಿದ್ದರು. ಸ್ಥಳೀಯರು ಅಸ್ವಸ್ಥಗೊಂಡಿರುವ ವೈಕುಂಠ ಅವರ ಫೋಟೋ ಕ್ಲಿಕ್ಕಿಸಿ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು […]