ಖಾಸಗಿ ಕಾರಿನಲ್ಲಿ ಶಬರಿಮಲೈ ಯಾತ್ರೆ: ಕಾರು ತಡೆದು ಪೊಲೀಸರಿಗೊಪ್ಪಿಸಿದ ಟ್ಯಾಕ್ಸಿ ಚಾಲಕರು

ಕುಂದಾಪುರ: ಖಾಸಗಿ ಕಾರಿನಲ್ಲಿ ಶಬರಿಮಲೆಯಾತ್ರೆಗೆ ತೆರಳುತ್ತಿದ್ದ ವೇಳೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳನ್ನು ತಡೆದ ಟ್ಯಾಕ್ಸಿ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿ ಕಾರನ್ನು ಪೊಲೀಸರಿಗೊಪ್ಪಿಸಿದ ಘಟನೆ ಕುಂದಾಪುರ ಶಾಸ್ತ್ರೀವೃತ್ತದಲ್ಲಿ ನಡೆದಿದೆ. ಬೈಂದೂರಿನ ಪಡುವರಿಯ ಏಳು ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗುರುವಾರ ಖಾಸಗಿ ನೋಂದಣಿಯ ಇನ್ನೋವಾ ಕಾರಿನಲ್ಲಿ ಶಬರಿಮಲೈ ಯಾತ್ರೆಗೆ ತೆರಳುತ್ತಿದ್ದರು. ಖಾಸಗಿ ವಾಹನದಲ್ಲಿ ಬಾಡಿಗೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ಹಾಗೂ ಉಡುಪಿ ಟ್ಯಾಕ್ಸಿ ಅಸೋಶಿಯೇಶನ್ ಸಂಘಟನೆಯ ಸದಸ್ಯರು ಶಾಸ್ತ್ರೀವೃತ್ತದಲ್ಲಿ ಅಯ್ಯಪ್ಪ ಮಾಲಾಧಾರಿಗಳು […]