ಕುಂದಾಪುರ; ತಾ.ಪಂ ಸಾಮಾನ್ಯ ಸಭೆಯಲ್ಲಿ ಮರಳು ವಿತರಣೆ ಗೊಂದಲದ ಬಗ್ಗೆ ವಾದ-ಪ್ರತಿವಾದ

ಕುಂದಾಪುರ: ಹಳ್ನಾಡುವಿನಲ್ಲಿರುವ ಮರಳು ದಾಸ್ತಾನು ಕೇಂದ್ರದಲ್ಲಿ ಮರಳು ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಜಿಲ್ಲಾಧಿಕಾರಿಗಳು ಮರಳು ಹಾಗೂ ಸಾಗಾಟ ವಾಹನಕ್ಕೆ ಈಗಾಗಲೇ ದರಪಟ್ಟಿ ನೀಡಿದ್ದರೂ ಮರಳು ವಿತರಕರು ತಮ್ಮ ಪರಿಚಯಸ್ಥರ ಲಾರಿಗಳನ್ನೇ ನಿಲ್ಲಿಸಿ ಮರಳಿಗೆ ಬೇಡಿಕೆ ಸೃಷ್ಟಿಯಾಗುವಂತೆ ಮಾಡುತ್ತಿದ್ದಾರೆ ಎಂದು ತಾ.ಪಂ ಸದಸ್ಯರು ಆರೋಪಿಸಿದ್ದಾರೆ. ಮಂಗಳವಾರ ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಮರಳು ವಿತರಣೆ ಗೊಂದಲದ ಬಗ್ಗೆ ವಾದ-ಪ್ರತಿವಾದ ನಡೆಯಿತು. ಮರಳು ವಿತರಣಾ ಕೇಂದ್ರದಲ್ಲಿ ದರ ನಿಗಧಿಗಿಂತ ಹೆಚ್ಚುವರಿ […]