ಕುಂದಾಪುರ:ಸುಜ್ಞಾನ ಪಿಯು ಕಾಲೇಜು:’ತೃಪ್ತಿ’ ಎಂಬ ಮೌಲ್ಯ ವ್ಯಕ್ತಿತ್ವದ ಭಾಗವಾಗಲಿ; ನ್ಯಾ. ಸಂತೋಷ್ ಹೆಗ್ಡೆ

ಕುಂದಾಪುರ: ವ್ಯಕ್ತಿತ್ವದಲ್ಲಿ ತೃಪ್ತಿ ಎನ್ನುವ ಮೌಲ್ಯವನ್ನು ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸೋಮವಾರ ನುಡಿದರು. ಕುಂದಾಪುರದ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕಾನೂನು ಬರುವ ಮೊದಲೇ ಸಮಾಜದಲ್ಲಿ ಕೆಲವು ಮೌಲ್ಯಗಳಿದ್ದವು. ಜನರು ಅದಕ್ಕೆ ಗೌರವ ನೀಡುತ್ತಿದ್ದರು. ಆದರೆ ಈಗ ಆ ಸಮಾಜ ಬದಲಾಗಿದೆ. ಶ್ರೀಮಂತರಿಗೆ ಮಣೆ ಹಾಕುವ ಪ್ರವೃತ್ತಿ ತಾಂಡವವಾಡುತ್ತಿದೆ. ಪ್ರಾಮಾಣಿಕತೆಗೆ, ಪ್ರಾಮಾಣಿಕರಿಗೆ ಬೆಲೆ ಇಲ್ಲದ ಹಾಗೇ ಆಗಿದೆ. ದುರಾಸೆ ಎಂಬ […]