ಕುಂದಾಪುರ: ಎಂ ಐ ಟಿ ಕೆ ಎಂ.ಬಿ.ಎ ಪದವಿ ವಿದ್ಯಾರ್ಥಿಗಳಿಂದ ಬೀದಿ ನಾಟಕ

ಕುಂದಾಪುರ: ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ಇಲ್ಲಿನ ಪ್ರಥಮ ಮತ್ತು ದ್ವಿತೀಯ ಎಂ.ಬಿ.ಎ ಪದವಿ ವಿದ್ಯಾರ್ಥಿಗಳು ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸುವ ಮೂಲಕ ಜನರ ಗಮನಸೆಳೆದರು. ಕುಂದಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀಮತಿ ಪುಷ್ಪಾ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು ಹಾಗೂ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಷ್ಟೇ ಸಮಾನತೆ ಕೊಟ್ಟರೆ ಏನನ್ನಾದರೂ ಸಾಧಿಸಬಲ್ಲಳು […]