ಕುಂದಾಪುರದಲ್ಲಿ ಅದ್ಧೂರಿ ಗಣರಾಜ್ಯೋತ್ಸವ: ಮಕ್ಕಳ ಮೊಗದಲ್ಲಿ ತ್ರಿವರ್ಣ ಸಂಭ್ರಮ,ಎಲ್ಲೆಲ್ಲೂ ವೈವಿಧ್ಯತೆ-ಏಕತೆಯ ಸಮಾಗಮ
ಕುಂದಾಪುರ: ರಾಜ್ಯಗಳ ಒಕ್ಕೂಟಗಳನ್ನೊಳಗೊಂಡ ಪ್ರಬಲ ಕೇಂದ್ರವನ್ನು ಹೊಂದಿರುವ ರಾಷ್ಟ್ರ ನಮ್ಮದು. ನಮ್ಮ ದೇಶದಲ್ಲಿ ಮೂರುವರೆ ಸಾವಿರ ಜಾತಿಗಳಿದ್ದರೂ ಎಲ್ಲಾ ಜಾತಿ-ಧರ್ಮಗಳ ಜನರು ಸಮಾನವಾಗಿ ಬದುಕುವ ಹಕ್ಕನ್ನು ಈ ದೇಶದ ಸಂವಿಧಾನ ನೀಡಿದ್ದು,ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳು ನಮ್ಮೊಳಗೆ ಐಕ್ಯತೆ, ಒಗ್ಗಟ್ಟನ್ನು ಬೆಳೆಸಬೇಕು. ನಾವೆಲ್ಲರೂ ತಾಯಿ ಭಾರತಾಂಬೆಯ ಮಕ್ಕಳೆಂಬ ಹೆಮ್ಮೆ ಹೆಚ್ಚಿಸಬೇಕು ಎಂದು ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಹೇಳಿದರು. ಅವರು ಕುಂದಾಪುರ ತಾಲೂಕು ಆಡಳಿತ, ಪುರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಇಲ್ಲಿನ ಗಾಂಧಿ […]