ಪೊಲೀಸರ ಬಳಿ ಕೊರೋನಾ ಸುಳಿಯದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಿಂದ ವಿಭಿನ್ನ ವ್ಯವಸ್ಥೆ
ಕುಂದಾಪುರ: ಮುಂಬೈನಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿರುವುದರಿಂದ ಎಚ್ಚೆತ್ತುಕೊಂಡಿರುವ ಗಂಗೊಳ್ಳಿ ಪೊಲೀಸರು, ಪೊಲೀಸ್ ಸಿಬ್ಬಂದಿಗನ್ನು ಕೊರೋನಾ ವೈರಸ್ನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮ ಕೈಗೊಂಡು ಗಮನ ಸೆಳೆದಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರು ಹಾಗೂ ದೂರುದಾರರಿಗೆ ಠಾಣೆಯ ಹೊರಗಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಠಾಣೆಯ ಹೊರಗಡೆ ಶಾಮಿಯಾನ್ ಹಾಕಿ ಠಾಣಾಧಿಕಾರಿ, ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹಾಗೂ ದೂರುದಾರರು ಠಾಣೆಗೆ ಬರುವಾಗ ಕೈಗಳನ್ನು ತೊಳೆದುಕೊಳ್ಳಲು ಠಾಣೆಯ […]