ಹೆದ್ದಾರಿ ಕಾಮಗಾರಿ ಸ್ಥಗಿತ: ರಿಕ್ಷಾ ಚಾಲಕರಿಂದ ಎಸಿಗೆ ಮನವಿ

ಕುಂದಾಪುರ: ಕಳೆದ ಕೆಲ ದಿನಗಳಿಂದ ತಲ್ಲೂರು ಪೇಟೆಯಲ್ಲಿ ನಡೆಯುತ್ತಿದ್ದ ಚತುಷ್ಪಥ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತಲ್ಲೂರು ರಿಕ್ಷಾ ಚಾಲಕರು ಕುಂದಾಪುರ ಸಹಾಯಕ ಆಯುಕ್ತ ಮಧುಕೇಶ್ವರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಕಂಪೆನಿ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆಗಳಿಗೆ ಮನ್ನಣೆ ಕೊಡದೆ ಅವೈಜ್ಞಾನಿಕ ಹಾಗೂ ವಿಳಂಬವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ವಾಹವ ಸವಾರರು, ಪಾದಚಾರಿಗಳು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ತೊಂದರೆಯಾಗಳಾಗುತ್ತಿದ್ದು, ತಲ್ಲೂರು ಜಂಕ್ಷನ್‌ನಲ್ಲಿ ಶೀಘ್ರ ರಸ್ತೆ ಕಾಮಗಾರಿ ನಡೆಸಬೇಕು […]