ಕುಂದಾಪುರ: ಮರಳು ಸಮಸ್ಯೆ ನಿವಾರಿಸಲು ಆಗ್ರಹಿಸಿ ಸಿಐಟಿಯಿಂದ ಶಾಸಕರ ಮನೆಯತ್ತ ಪಾದಯಾತ್ರೆ
ಕುಂದಾಪುರ: ತಾಲೂಕಿನಲ್ಲಿ ಕಾಡುತ್ತಿರುವ ಮರಳು ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘ ಸಿಐಟಿಯು ನೇತೃತ್ವದಲ್ಲಿ ಶಾಸಕರ ಮನೆಯತ್ತ ಪಾದಯಾತ್ರೆ ಆರಂಭಗೊಂಡಿದೆ. ಸೋಮವಾರ ಬೆಳಿಗ್ಗೆ ೯.೩೦ಕ್ಕೆ ಕುಂದಾಪುರದ ವಿನಾಯಕ ಥಿಯೇಟರ್ನಿಂದ ಆರಂಂಭಗೊಂಡ ಕಾರ್ಮಿಕರ ಪಾದಯಾತ್ರೆಯು ಸಂಜೆ ಸುಮಾರು ೪ ಗಂಟೆಗೆ ಹಾಲಾಡಿಯಲ್ಲಿರುವ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಮನೆಗೆ ತಲುಪಿ ಶಾಸಕರಿಗೆ ಮನವಿ ನೀಡಲಿದೆ. ಪಾದಯಾತ್ರೆಯಲ್ಲಿ ವಿವಿಧ ಭಾಗದ ಸುಮಾರು […]