ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಿನ್ನಮತ ಸ್ಪೋಟ: ಗಫೂರ್ ಭಾಷಣಕ್ಕೆ ಕಾರ್ಯಕರ್ತನಿಂದ ತಡೆ

ಕುಂದಾಪುರ: ಇಲ್ಲಿನ ಆರ್.ಎನ್ ಶೆಟ್ಟಿ ಮಿನಿ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಗಫೂರ್ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರೆ ಅಡ್ಡಿಮಾಡಿದ ಘಟನೆ ನಡೆದಿದೆ. ಕಾರ್ಯಕರ್ತರ ಸಮಾವೇಶದಲ್ಲಿ ಗಫೂರ್ ಭಾಷಣ ಆರಂಭಿಸುತ್ತಿದ್ದಂತೆ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆಗಮಿಸಿದ್ದು, ನೆರೆದಿದ್ದ ಕಾರ್ಯಕರ್ತರಿಗೆ ಹಸ್ತಲಾಘವ ನೀಡಿ ಕುಶಲೋಪಹರಿ ವಿಚಾರಿಸುತ್ತಿದ್ದರು. ಈ ವೇಳೆಯಲ್ಲಿ ಭಾಷಣ ನಿಲ್ಲಿಸಿದ ಗಫೂರ್ ಪ್ರಮೋದ್ ಮಧ್ವರಾಜ್ ಅವರನ್ನು ಬರಮಾಡಿಕೊಂಡರು. ಮತ್ತೆ ಗಫೂರ್ ಭಾಷಣ ಆರಂಭಿಸುತ್ತಿದ್ದಂತೆ ಸಭಿಕರ ಸಾಲಿನಲ್ಲಿ ಕೂತ ಕಾಂಗ್ರೆಸ್ ಕಾರ್ಯಕರ್ತ ಚೋರಾಡಿ ಅಶೋಕ್ […]