ನಂಗಂತೂ ಎಕ್ಸಾಮ್ ಈಝೀ ಆಯ್ತ್ ಮರೈತಿ! :ಎಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಖುಷ್ ಆದ ಕುಂದಾಪ್ರ ವಿದ್ಯಾರ್ಥಿಗಳು

ಎಕ್ಸಾಮ್ ಎಷ್ಟ್ ಈಝೀ ಆಯ್ತಲಾ. ನಾನು ಓದ್ಕಂಡಿದ್ದೆ ಬಂದಿತ್ ಮರೈತಿ. ನಾನ್ ಸಿಲೆಬಸ್ಸ್ ಹೊರಗಿನ್ ಪ್ರಶ್ನೆ ಕೇಳ್ತ್ರಂತ ಹೆದ್ರಿಕಿಯಲ್ ಇದ್ದಿದೆ ಮರಯಾ. ನಾನ್ ಎರಡುವರೆ ಗಂಟೆಯೊಳ್ಗ್ ಪರೀಕ್ಷೆ ಮುಗ್ಸಿದೆ. ಅದೆಲ್ಲಾ ಹೊಯ್ಲಿ ನೀನ್ ನಾಲ್ಕನೆ ಪ್ರಶ್ನೆಗ್ ಏನ್ ಬರ್ದೆ. ನಾನ್ ನಿಂಗೆ ಹೇಳಿಲ್ಯ ಅದೇ ಪ್ರಶ್ನೆ ಕೊಡ್ತಾರಂತ. ೨೦೧೮-೧೯ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನವಾದ ಗುರುವಾರ ಕನ್ನಡ ಪರೀಕ್ಷೆ ಬರೆದು ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗಳ ಬಾಯಿಯಿಂದ ಕೇಳಿಬಂದ ಮಾತುಗಳಿವು. ಕುಂದಾಪುರದ ಬೋರ್ಡ್ ಹೈಸ್ಕೂಲ್‌ನಲ್ಲಿ ಎಸೆಸ್ಸೆಲ್ಸಿ ಪರೀಕ್ಷೆ […]