ವೃದ್ಧಾಶ್ರಮದಲ್ಲಿ ಅಪ್ಪನನ್ನೇ ಗೃಹ ಬಂಧನದಲ್ಲಿರಿಸುವಂತೆ ಸೂಚಿಸಿದ ಮಗ ! ತಂದೆಯಿಂದ ದೂರು

ಕುಂದಾಪುರ : ತನ್ನನ್ನು ವೃದ್ಧಾಶ್ರಮದಲ್ಲಿ ಗೃಹ ಬಂಧನದಲ್ಲಿ ಇರಿಸಿರುವ ಕುರಿತು ಉಪವಿಭಾಗಾಧಿಕಾರಿಯವರಿಗೆ  ಹಿರಿಯ ನಾಗರಿಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಪ್ರಕರಣದ ತನಿಖೆ ನಡೆದಿದೆ. ಸ್ಥಳೀಯ ವೃದ್ಧಾಶ್ರವೊಂದರ ನಿಲಯವಾಸಿಯಾಗಿ ಸೇರ್ಪಡೆಯಾಗಿರುವ ಹಿರಿಯಡ್ಕದ ನಿವಾಸಿ ಮಂಜುನಾಥ ಜೋಗಿ ಎನ್ನುವವರು  ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಯೋಗ ಕ್ಷೇಮಾಧಿಕಾರಿ ಗಣೇಶ್‌ ಮರಾಠೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಪ್ರಕರಣದ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಜು.10 ರಂದು ವೃದ್ಧಾಶ್ರಮಕ್ಕೆ ಬಂದಿರುವ ನನ್ನನ್ನು ಗೃಹಬಂಧನದಲ್ಲಿ ಇರಿಸಲು ಮಂಗಳೂರಿನಲ್ಲಿ ಇರುವ […]