ರಾಜ್ಯಾದ್ಯಂತ ಲಾಕ್‍ಡೌನ್‍ಗೆ ಕುಂದಾಪುರ ಅಂಗಡಿ ಮಾಲೀಕರು ಸಂಪೂರ್ಣ ಬೆಂಬಲ
ಕುಂದಾಪುರ: ಕೊರೋನಾ ವೈರಸ್ ರಾಜ್ಯದೆಲ್ಲಡೆ ವ್ಯಾಪಕವಾಗಿ ಹಬ್ಬುತ್ತಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪನವರು ಆದೇಶಿದ ರಾಜ್ಯಾದ್ಯಂತ ಲಾಕ್‍ಡೌನ್‍ಗೆ ಕುಂದಾಪುರ ಅಂಗಡಿ ಮಾಲೀಕರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ರಸ್ತೆಗಿಳಿಯದ ಬಸ್‍ಗಳು, ಆಟೋ ರಿಕ್ಷಾಗಳು: ಅಗತ್ಯ ಬೇಕಾಗಿರುವ ಮೆಡಿಕಲ್, ತರಕಾರಿ, ಮಾಂಸ, ಮೀನು, ದಿನಸಿ ಸಾಮಾನುಗಳ ಅಂಗಡಿಗಳು ತೆರೆದಿದ್ದು ಬಹುತೇಕ ಎಲ್ಲರೂ ತಮ್ಮ ಅಂಗಡಿಗಳನ್ನು ತೆರೆಯದೆ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಬೆರಳೆಣಿಕೆಯ ಮಂದಿ ದಿನನಿತ್ಯದ ವಸ್ತುಗಳನ್ನು ಖರೀದಿಸಲು ನಗರಕ್ಕೆ ಆಗಮಿಸಿದ್ದಾರೆ. ಎಂದಿನಂತೆ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಸಾರಿಗೆ ಬಸ್‍ಗಳು […]