ಜನತಾ ಕಫ್ರ್ಯೂಗೆ ಜೈ ಎಂದ ಜನತೆ: ಕುಂದಾಪುರ ತಾಲೂಕಿನಾದ್ಯಂತ ಸಂಪೂರ್ಣ ಬಂದ್ ವ್ಯಾಪಾರ, ವಹಿವಾಟು, ವಾಹನ ಸಂಚಾರ, ಮೀನುಗಾರಿಕೆ ಸಂಪೂರ್ಣ ಸ್ತಬ್ಧ

-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ಕರೋನಾ ವೈರಸ್ ತಡೆಗಾಗಿ ಪ್ರಧಾನಿ ಮೋದಿ ಭಾನುವಾರ ಕರೆಕೊಟ್ಟಿರುವ ಜನತಾ ಕರ್ಪ್ಯೂಗೆ ತಾಲೂಕಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಭಾನುವಾರ ರಜೆಯ ದಿನವಾದ್ದರಿಂದ ಮತ್ತು ಕೊರೋನಾ ವೈರಸ್‍ನಿಂದಾಗಿ ಭಯಭೀತರಾಗಿದ್ದರಿಂದ ಸಾಮಾಜಿಕ ಕಳಕಳಿಗಿಂತಲೂ ಸ್ವಯಂ ರಕ್ಷಣೆ ಅನಿವಾರ್ಯ ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡಿರುವುದು ಭಾನುವಾರದ ನಡೆದಿರುವ ಬೆಳವಣಿಗೆ ಸಾಕ್ಷೀಕರಿಸಿದೆ. ಕುಂದಾಪುರದ ಪ್ರಮುಖ ಪೇಟೆಗಳಲ್ಲಿನ ವ್ಯಾಪಾರಸ್ಥರು ತಮ್ಮ ಅಂಗಡಿಗಳ ಬಾಗಿಲು ತೆರೆಯದೇ ಬಂದ್‍ಗೆ ಬೆಂಬಲ ಸೂಚಿಸಿದ ಪರಿಣಾಮ ಮುಖ್ಯ ಪೇಟೆಯ ರಸ್ತೆಗಳೆಲ್ಲಾ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಬಸ್ […]