ಕುಂದಾಪುರ ಮೂಡ್ಲಕಟ್ಟೆ ಸಮೀಪದ ಸಟ್ವಾಡಿಯ ಮನೆಯೊಂದರಲ್ಲಿ ಕಳವು ಪ್ರಕರಣ: ಆರೋಪಿಗಳ ಬಂಧನ
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಸಮೀಪದ ಸಟ್ವಾಡಿಯ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬಂಧಿಸುವಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಉಪ್ಪುಂದ ಶಾಲೆಬಾಗಿಲು ನಿವಾಸಿಗಳಾದ ಶ್ರೀಧರ(32) ಹಾಗೂ ಪತ್ನಿ ಸ್ವಾತಿ(26) ಬಂಧಿತ ಆರೋಪಿಗಳು. ಸಟ್ವಾಡಿ ನಿವಾಸಿ ದಿನಾಕರ್ ಶೆಟ್ಟಿ ಮತ್ತು ಮನೆಯವರು ಭಾನುವಾರ ರಾತ್ರಿ ಕೋಟೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ವೇಳೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ಎದುರಿನ ಬಾಗಿಲು ಒಡೆದು ಒಳಪ್ರವೇಶಿಸಿದ ಕಳ್ಳರು ಕವಾಟಿನಲ್ಲಿದ್ದ 1 ವಜ್ರದ ಕರಿಮಣಿ […]