ಅವೈಜ್ಙಾನಿಕ ಕಾಮಗಾರಿ: ಜಾಲಾಡಿಯಲ್ಲಿ ಯೂ ಟರ್ನ್ ನೀಡಲು ಆಗ್ರಹ,ಸಾರ್ವಜನಿಕರಿಂದ ಬೃಹತ್ ಕಾಲ್ನಡಿಗೆ ಜಾಥಾ, ಬಹಿರಂಗ ಸಭೆ.
ಕುಂದಾಪುರ: ಹೆಮ್ಮಾಡಿಯ ಮೂವತ್ತುಮುಡಿಯಿಂದ -ಜಾಲಾಡಿ ತನಕ ಸರ್ವೀಸ್ ರಸ್ತೆ ಹಾಗೂ ಜಾಲಾಡಿಯಲ್ಲಿ ಕ್ರಾಸಿಂಗ್ ನೀಡಲು ಆಗ್ರಹಿಸಿ ಶುಕ್ರವಾರ ದಾರಿಗಾಗಿ ಧ್ವನಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಜಾಲಾಡಿ ಸರ್ಕಲ್ನಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾ ಸಂತೋಷನಗರ, ಹೆಮ್ಮಾಡಿ ಪೇಟೆ ಸುತ್ತುವರಿದು ಪಂಚಾಯತ್ ತನಕ ಸಾಗಿ ಅಲ್ಲಿ ಬಹಿರಂಗ ಸಭೆ ನಡೆಯಿತು. ಹೆಮ್ಮಾಡಿ ಪಂಚಾಯತ್ ಎದುರು ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಪತ್ರಕರ್ತ ಶಶಿಧರ ಹೆಮ್ಮಾಡಿ, ಕರಾವಳಿಯಲ್ಲಿ ಚತುಷ್ಪಥ ಕಾಮಗಾರಿ ಆರಂಭವಾದ ದಿನದಿಂದಲೂ ಸಾರ್ವಜನಿಕರು ಒಂದಿಲ್ಲೊಂದು […]