ಕುಂದಾಪುರ: ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ‘ಆವಿಷ್ಕಾರ ಬಿಸಿನೆಸ್ ಡೇ’
ಕುಂದಾಪುರ ನ.14:ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ನಮ್ಮಲ್ಲಿ ನಕರಾತ್ಮಕ ಯೋಚನೆಗಳು ಬರಬಾರದು. ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಇವತ್ತು ಬಹುತೇಕ ಅವಘಡಗಳಿಗೆ ಮೊಬೈಲ್ ಬಳಕೆಯೇ ನೆಪವಾಗುತ್ತಿದೆ. ಆತ್ಮಹತ್ಯೆ ಯಂತಹ ನಕರಾತ್ಮಕ ಯೋಚನೆಗಳು ಮನಸಿನಲ್ಲಿ ಮೂಡಬಾರದು ಎಂದು ಪ್ರಸಿದ್ಧ ಮುಳುಗುತಜ್ಞ ಈಶ್ವರ ಮಲ್ಪೆ ಹೇಳಿದರು. ನ.12ರಂದು ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ ಬ್ಯುಸಿನೆಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಸೇವಕ ರವಿ ಕಟಪಾಡಿ, ಬದುಕು ನಾವು ಭಾವಿಸಿದಂತೆ ಇರುವುದಿಲ್ಲ ನಾವು ಏನೆಂಬುದನ್ನು […]