ಕುಂದಾಪುರ:ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿದ ಮೂವರು ಆರೋಪಿಗಳ ಬಂಧನ
ಕುಂದಾಪುರ: ಕೊಲ್ಲೂರು ವನ್ಯಜೀವಿ ವಲಯದ ವ್ಯಾಪ್ತಿಯ ಮಾದಿಬರೆ ಮೀಸಲು ಅರಣ್ಯದ ಒಳಗೆ ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಮಾವಿನಕಾರು ನಿವಾಸಿಗಳಾದ ಉದಯ ನಾಯ್ಕ, ಪ್ರಶಾಂತ ನಾಯಕ, ಹುಲಿಪಾರೆ ನಿವಾಸಿ ನಾರಾಯಣ ಶೆಟ್ಟಿ ಬಂಧಿತರು. ನಾರಾಯಣ ಶೆಟ್ಟಿ ಎಂಬವರು ತಾನು ಕಟ್ಟುತ್ತಿರುವ ಹೊಸ ಮನೆಯ ದೇವರ ಕೋಣೆಗೆ ಸಾಗುವಾನಿ ಮರವನ್ನು ತಂದುಕೊಡುವಂತೆ ಉದಯ ಮತ್ತು ಪ್ರಶಾಂತ್ ಎಂಬವರಿಗೆ ಪ್ರೆರೇಪಿಸಿದ್ದು ಆರೋಪಿಗಳು ಅಕ್ರಮವಾಗಿ ಸಾಗುವಾನಿ ಕಡಿದಿದ್ದ ಬಗ್ಗೆ ವಿಚಾರಣೆ […]