ಕುಂದಾಪುರ: ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು
ಕುಂದಾಪುರ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಆನಗಳ್ಳಿ ಎಂಬಲ್ಲಿ ನಡೆದಿದೆ. ಮೃತರನ್ನು ಬಡಾಕೇರಿ ಗ್ರಾಮದ ಸಾತುಬೆಟ್ಟು ನಿವಾಸಿ ರಾಜು ಬಿ(48) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಕ್ಯಾಟರಿಂಗ್ ಕೆಲಸ ಮಾಡಿ ಕೊಂಡಿದ್ದ ಇವರು, ಜೂ.20ರಂದು ಊರಿಗೆ ಹೊರಟು ಬಂದಿದ್ದರು. ಬಳಿಕ ನಾಪತ್ತೆಯಾಗಿದ್ದ ಇವರ ಮೃತದೇಹ ಜೂ.21ರಂದು ಮದ್ಯಾಹ್ನ ವೇಳೆ ಆನಗಳ್ಳಿಯ ಹೊಳೆಯಲ್ಲಿ ಪತ್ತೆಯಾಗಿದೆ. ಇವರು ಆನಗಳ್ಳಿಯ ನದಿಯ ಸಮೀಪಕ್ಕೆ ಹೋದಾಗ ಮಳೆಯಿಂದ ಅಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ […]