ಕೊರೋನಾ ಆತಂಕ: ಸೋಶಿಯಲ್ ಮೀಡಿಯಾ ಸುಳ್ಳು ಸುದ್ದಿಗಳಿಂದ ಬೆಚ್ಚಿ ಬೀಳುತ್ತಿರುವ ಜನತೆ: ಕುಂದಾಪುರದಲ್ಲಿ ವ್ಯಾಪಾರ ವಹಿವಾಟು ಸ್ಥಬ್ಧ

– ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ಚೀನಾದಲ್ಲಿ ಸಾವಿನ ಕರೆಗಂಟೆ ಭಾರಿಸಿದ ಕೊರೋನಾ ಮಹಾಮಾರಿ ಇದೀಗ ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದೆ. ಕೊರೋನಾದಿಂದಾಗಿ ವ್ಯಾಪಾರ ವಹಿವಾಟು ಸಂಪೂರ್ಣ ನೆಲಕಚ್ಚಿ ಹೋದ ಬೆನ್ನಲ್ಲೇ ಕೆಲ ದುಷ್ಕರ್ಮಿಗಳು ಸೋಶೀಯಲ್ ಮೀಡಿಯಾಗಳಲ್ಲಿ ಹರಿದುಬಿಡುತ್ತಿರುವ ಕೆಲವು ಸುಳ್ಳು ಸುದ್ಧಿಗಳಿಂದಾಗಿ ಜನರು ಬೆಚ್ಚಿ ಬೀಳುತ್ತಿದ್ದಾರೆ. ಕ್ಷಣಕ್ಷಣಕ್ಕೂ ಹರಡುತ್ತಿರುವ ಗಾಳಿ ಸುದ್ಧಿಗಳಿಂದಾಗಿ ಸಾರ್ವಜನಿಕರು ಅಕ್ಷರಶಃ ಆತಂಕಕಕ್ಕೀಡಾಗಿದ್ದಾರೆ. ಪರಿಣಾಮವಾಗಿ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಕುಂದಾಪುರದ ಬಹುತೇಕ ಜನನಿಬಿಡ ಪ್ರದೇಶಗಳಲ್ಲಿ ಇದೀಗ ಸ್ವಯಂಘೋಷಿತ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. ಕುಂದಾಪುರ […]