ಕುಂದಾಪುರ: ಬಸ್ ನಿರ್ವಾಹಕನ‌ ಕೊಲೆಗೆ ಯತ್ನ: ಓರ್ವನ ಬಂಧನ

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು‌ ಪೊಲೀಸರು ಬಂಧಿಸಿದ್ದಾರೆ. ಆಲೂರು ಗ್ರಾಮದ ಪ್ರದೀಪ್ ಪೂಜಾರಿ(28) ಬಂಧಿತ ಆರೋಪಿ. ಜೂ. 2ರಂದು ಈತ ಹಾಗೂ ಇತರ ಐದು ಮಂದಿ‌ ಆಲೂರು -ಕುಂದಾಪುರ ಮಾರ್ಗದಲ್ಲಿ ಸಂಚರಿಸುವ ಜಯದುರ್ಗಾ ಬಸ್‌ಗೆ ಆಲೂರು ಗ್ರಾಮದ ಹೊಯಿಗೆಹರ ಬಸ್ ನಿಲ್ದಾಣದಲ್ಲಿ ಹತ್ತಿದ್ದಾರೆ. ಬಳಿಕ ನಿರ್ವಾಹಕ ಗಣೇಶ್ ಜೊತೆ ಜಗಳವಾಡಿ, ಅವರ ಶರ್ಟ್ ಕಾಲರ್ ಪಟ್ಟಿಯನ್ನು ಹಿಡಿದು, ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಗಣೇಶ್ […]