ಕುಂದಾಪುರ: ಚೌತಿಯ ಸಡಗರ,ಆನೆಗುಡ್ಡೆಯಲ್ಲಿ ಭಕ್ತರ ದಂಡು
ಕುಂದಾಪುರ: ತಾಲೂಕಿನೆಲ್ಲೆಡೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸೋಮವಾರದಂದು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆನಿಂದಲೇ ಮಳೆಯಿಲ್ಲದ ಕಾರಣ ಪ್ರಮುಖ ಗಣಪತಿ ದೇವಾಲಯಗಳಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಆನೆಗುಡ್ಡೆಯಲ್ಲಿ ಭಕ್ತರ ದಂಡು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಬೆಳಿಗ್ಗೆನಿಂದಲೇ ವಿಶೇಷ ಪೂಜಾ-ಕೈಂಕರ್ಯಗಳು, ಗಣಹೋಮ, ಮಹಾಪ್ರಸಾದ ಮೊದಲಾದ ಧಾರ್ಮಿಕ ಕಾರ್ಯಗಳು ನಡೆದವು. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಅನಿವಾಸಿ […]