ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಪ್ರತ್ಯಕ್ಷವಾದ ಕಾಡಾನೆ;ಜನರಲ್ಲಿ ಆತಂಕ ಸೃಷ್ಟಿ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲೇ ಕಾಡಾನೆ ಓಡಾಟ ನಡೆಸಿದ ಘಟನೆ ರವಿವಾರ ಸಂಜೆ ವೇಳೆ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ಸಮೀಪದ ದೇವರಗದ್ದೆ ಅರಣ್ಯ ಪ್ರದೇಶ ಭಾಗದಿಂದ ಈ ಒಂಟಿ ಸಲಗ ಆಗಮಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಯನ್ನು ಮರಳಿ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆಕಾಡಾನೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯ ವ್ಯಾಸಮಂದಿರ ಬಳಿಯಿಂದ ಸುಬ್ರಹ್ಮಣ್ಯ ಮಠದ ಸಮೀಪದ ಮೂಲಕ ಸಂಚರಿಸಿ, ಮತ್ತೆ ಅರಣ್ಯ ಭಾಗಕ್ಕೆ ತೆರಳಿದೆ. ಕಾಡಾನೆ ವ್ಯಾಸಮಂದಿರದ ಸಮೀಪದಿಂದ ಹಾದು ಹೋಗುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಕಾಡಾನೆ […]