ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು: ಡಾ. ವಿದ್ಯಾಭೂಷಣರಿಂದ ಸಂಗೋಷ್ಠಿ

ಮಂಗಳೂರು: ಭಕ್ತಿಯ ಮೂಲಕ ಭಗವಂತನ ಆರಾಧನೆಯೇ ನಮ್ಮ ಜೀವನದ ಪರಮಮೌಲ್ಯ. ಅದಕ್ಕೆ ಪೋಷಕವಾಗಿ ಸದ್ಗುಣಗಳಿಂದ ದೇಹವನ್ನು ಮನವನ್ನು ಶೋಧಿಸಿ ಶುಚಿಯಾಗಿಟ್ಟುಕೊಳ್ಳುವುದೇ ಜೀವನಮೌಲ್ಯ ಎಂದು ಹರಿದಾಸರು ತಮ್ಮ ಕೀರ್ತನೆಗಳ ಮೂಲಕ ಹಾಡಿದ್ದಾರೆ. ಮಾತ್ರವಲ್ಲ ಅಂತೆಯೇ ಬಾಳಿ ಬದುಕಿ ತೋರಿಸಿಕೊಟ್ಟಿದ್ದಾರೆ ಎಂದು ಸಂಗೀತವಿದ್ಯಾನಿಧಿ ಡಾ. ವಿದ್ಯಾಭೂಷಣರು ಹೇಳಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮಂಗಳೂರು ವಿಭಾಗ ಏರ್ಪಡಿಸಿದ ‘ದಾಸಸಾಹಿತ್ಯದಲ್ಲಿ ಜೀವನಮೌಲ್ಯಗಳು’ ಎಂಬ ಸಂಗೋಷ್ಠಿಯಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡುತ್ತಿದ್ದರು. ‘ನಮ್ಮ ಜೀವನ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರಬೇಕು. ಎಲ್ಲ ಅಹಂಕಾರ ಮಮಕಾರಗಳನ್ನು […]