ಬಜೆ ಜಲಾಶಯದಲ್ಲಿ ನೀರಿದ್ದರೂ ಕೃಷಿಗೆ ನೀರು ಕೊಡುತ್ತಿಲ್ಲ: ಕುದಿ ಶ್ರೀನಿವಾಸ ಭಟ್
ಉಡುಪಿ: ಕಳೆದ 22 ದಿನಗಳಿಂದ ರೈತರ ಬೆಳೆಗಳಿಗೆ ನೀರಿಲ್ಲ. ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಬಿಸಿಲಿನ ತಾಪಕ್ಕೆ ರೈತರ ಬೆಳೆ ಒಣಗಿ, ಅವರ ಬದುಕೇ ನಾಶವಾಗುತ್ತಿದೆ. ಬಜೆ ಅಣೆಕಟ್ಟಿನಲ್ಲಿ ಸಾಕಷ್ಟು ನೀರಿದ್ದರೂ ಕೃಷಿಗೆ ನೀರು ಕೊಡುತ್ತಿಲ್ಲ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯಡಕ ನದಿಪಾತ್ರದ ರೈತರ ವಿದ್ಯುತ್ ಪಂಪ್ ಸೆಟ್ಗಳನ್ನು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಹಾಗೂ ವಾರದಲ್ಲಿ ಎರಡು ದಿನ ಕೃಷಿ […]