ವಿಭಾಗ ಪ್ರಭಾರಿಯಾಗಿ ಕೆ. ಉದಯಕುಮಾರ್ ಶೆಟ್ಟಿ ನೇಮಕ

ಮಂಗಳೂರು: ಬಿಜೆಪಿಯ ಮಂಗಳೂರು ವಿಭಾಗ ಪ್ರಭಾರಿಯಾಗಿ ಬಿಜೆಪಿಯ ಹಿರಿಯ ಮುಖಂಡ ಕಿದಿಯೂರು ಉದಯಕುಮಾರ್ ಶೆಟ್ಟಿ ಅವರನ್ನು  ಮತ್ತೊಮ್ಮೆ ನೇಮಕ ಮಾಡಲಾಗಿದೆ. ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇಮಕ ಮಾಡಿ ಆದೇಶಿಸಿದ್ದಾರೆ. ಮಂಗಳೂರು ವಿಭಾಗದಲ್ಲಿ ಉಡುಪಿ, ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲೆಗಳು ಒಳಗೊಂಡಿರುತ್ತವೆ. ಕಳೆದ ಬಾರಿಯೂ ಉದಯಕುಮಾರ್ ಶೆಟ್ಟಿಯವರು ಮಂಗಳೂರು ವಿಭಾಗದ ಪ್ರಭಾರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಆ ಅವಧಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ವಿಭಾಗದ ೧೫ಕ್ಷೇತ್ರಗಳಲ್ಲಿ ೧೪ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿತ್ತು. ಅಷ್ಷೇ ಅಲ್ಲದೇ ಜಿಲ್ಲಾ […]