ಮಂಗಳೂರು-ಕಾರ್ಕಳ ರಸ್ತೆಗಿಳಿಯಿತು‌ ಸರಕಾರಿ ಬಸ್ಸು: ಜನತೆಯಿಂದ ಭರ್ಜರಿ ಸ್ವಾಗತ: ಇಲ್ಲಿದೆ ಬಸ್ ವೇಳಾಪಟ್ಟಿ!

ಮಂಗಳೂರು-ಕಾರ್ಕಳ: ಕಾರ್ಕಳ-ಮಂಗಳೂರು ದಾರಿಯಲ್ಲಿ ಸರಕಾರಿ ಬಸ್ಸು ಓಡಾಡಬೇಕು ಎನ್ನುವುದು ಇಲ್ಲಿನ ಜನರ, ವಿದ್ಯಾರ್ಥಿಗಳ ಬಹು ವರ್ಷಗಳ ಕನಸಾಗಿತ್ತು. ಗ್ಯಾರಂಟಿ ಯೋಜನೆ ಬಂದ ಮೇಲಂತೂ ಸರಕಾರಿ ಬಸ್ಸನ್ನು ಈ ದಾರಿಯಲ್ಲಿ ಬಿಡಲೇಬೇಕು ಎನ್ನುವ ಆಗ್ರಹ ಜಾಸ್ತಿಯಾಗಿತ್ತು. ಈಗ ಸರಕಾರಿ ಬಸ್ಸಿನ ಕನಸು ಈಡೇರಿದೆ. ಡಿ.12 ಗುರುವಾರದಿಂದ ಕಾರ್ಕಳ-ಮೂಡುಬಿದಿರೆ ದಾರಿಯಲ್ಲಿ ಸರಕಾರಿ ಬಸ್ಸು ಸಂಚಾರ ಆರಂಭಿಸಿದ್ದು ಜನತೆ ಹರ್ಷರಾಗಿದ್ದಾರೆ.ಇಷ್ಟು ದಿನ ಖಾಸಗಿ ಬಸ್ ಗಳ ಒತ್ತಡದಿಂದ ಸರಕಾರಿ ಬಸ್ಸು ರಸ್ತೆಗಿಳಿಯದೇ ಜನರು ಸಮಸ್ಯೆ ಅನುಭವಿಸಿದ್ದರು. ಖಾಸಗಿ ಬಸ್ಸು ಮಾಲೀಕರು ಶಾಸಕರಿಗೆ, […]