ಉಡುಪಿ: ಶ್ರೀಕೃಷ್ಣ ಲೀಲೋತ್ಸವಕ್ಕೆ ಭರದ ಸಿದ್ಧತೆ; ಗುರ್ಜಿ ನೆಡುವ ಮುಹೂರ್ತ
ಉಡುಪಿ: ಸೆಪ್ಟೆಂಬರ್ 11ರಂದು ಉಡುಪಿ ಶ್ರೀಕೃಷ್ಣಮಠದ ರಥಬೀದಿಯಲ್ಲಿ ನಡೆಯುವ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಪೂರ್ವತಯಾರಿಯ ಹಿನ್ನೆಲೆಯಲ್ಲಿ ಪರ್ಯಾಯ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯ ಮಾರ್ಗದರ್ಶನದಲ್ಲಿ ಇಂದು ರಥಬೀದಿಯಲ್ಲಿ ಗುರ್ಜಿ ನೆಡುವ ಮುಹೂರ್ತವನ್ನು ನೆರವೇರಿಸಲಾಯಿತು. ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ಪಾರುಪತ್ಯ್ ಗಾರ ಮುದರಂಗಡಿ ಲಕ್ಷ್ಮೀಶ ಭಟ್, ಕೊಠಾರಿಗಳಾದ ಶ್ರೀರಮಣ ಆಚಾರ್ಯ ವ್ಯವಸ್ಥಾಪಕ ಗೋವಿಂದರಾಜ್, ಮೇಸ್ತ್ರಿ ಪದ್ಮನಾಭ ಮೇಸ್ತ್ರಿ, ಪ್ರದೀಪ್ ಕುಮಾರ್ ಮತ್ತು ಮಠದ ಸಿಬ್ಬಂದಿ ಉಪಸ್ಥಿತರಿದ್ದರು.