ಶ್ರೀಕೃಷ್ಣ ಮಠ:ಬೃಹತ್ ಉಚಿತ ಚರ್ಮರೋಗ ತಪಾಸಣೆ ಹಾಗು ಹೃದಯ ರೋಗ ತಪಾಸಣಾ ಶಿಬಿರ ಉದ್ಘಾಟನೆ
ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ, ಶ್ರೀಧನ್ವಂತರಿ ಚಿಕಿತ್ಸಾಲಯ,ಲಯನ್ಸ್ ಕ್ಲಬ್ ಅಂಬಲಪಾಡಿ ಮತ್ತು ಲಯನ್ಸ್ ಕ್ಲಬ್ ಕಲ್ಯಾಣಪುರ ಇವರ ಆಯೋಜನೆಯಲ್ಲಿ ನಡೆದ ಬೃಹತ್ ಉಚಿತ ಚರ್ಮರೋಗ ತಪಾಸಣೆ ಹಾಗು ಹೃದಯ ರೋಗ ತಪಾಸಣಾ ಶಿಬಿರವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ.ಸತೀಶ್ ಪೈ, ಡಾ.ಸುಧೀರ್ ನಾಯಕ್, ಡಾ.ನಿಶಾಂತ್ ಶೆಟ್ಟಿ, ಡಾ.ರವೀಂದ್ರ, ಡಾ.ನರಸಿಂಹ ರಾವ್ ಮತ್ತು ಲ|ಪಿ.ಎಲ್.ಭಟ್, ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಮಠ:1500 ಗೋವುಗಳಿಗೆ ದೇಣಿಗೆ ಸಂಗ್ರಹ
ಉಡುಪಿ: ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ನಡೆದ ವಿಟ್ಲಪಿಂಡಿ ಉತ್ಸವದಂದು ಪೇಜಾವರ ಮಠಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರಯುವ ನೀಲಾವರ ಗೋಶಾಲೆಯ ಸುಮಾರು 1500 ಗೋವುಗಳಿಗೆ ಜಿಲ್ಲಾ ಯುವಬ್ರಾಹ್ಮಣ ಪರಿಷತ್ತಿನ ಸದಸ್ಯರು ಹಾಗೂ ಭಕ್ತಾಧಿಗಳಿಂದ ದೇಣಿಗೆ ಸಂಗ್ರಹವನ್ನು 10 ವರ್ಷಗಳಿಂದ ಮಾಡುತ್ತಿದ್ದು, ಈ ವರ್ಷ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ದೇಣಿಗೆ ಹಾಕುವ ಮೂಲಕ ಚಾಲನೆ ನೀಡಿದರು. ಪರಿಷತ್ತಿನ ಅಧ್ಯಕ್ಶರಾದ […]
ಶ್ರೀ ಕೃಷ್ಣ ಮಠದಲ್ಲಿ ಸೀಯಾಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಅಭಿಷೇಕ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಕೃಷ್ಣ ದೇವರಿಗೆ 1108 ಸೀಯಾಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಅಭಿಷೇಕವನ್ನು ಪರ್ಯಾಯ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನೆರವೇರಿಸಿದರು.
ಶ್ರೀ ಕೃಷ್ಣ ಮಠದಲ್ಲಿ ಭರತನಾಟ್ಯ ಕಾರ್ಯಕ್ರಮ
ಉಡುಪಿ: ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ,ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಭಾವನ ಭಾಗವತ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಶ್ರೀಕೃಷ್ಣಮಠದಲ್ಲಿ ಗಾಳಿಯಿಂದ ನೀರು ಉತ್ಪಾದಿಸುವ ಯಂತ್ರ ಉದ್ಘಾಟನೆ
ಉಡುಪಿ: ಶ್ರೀಕೃಷ್ಣಮಠದಲ್ಲಿ ಮುಂಬೈ ಮೂಲದ ಏರ್ ಓ ವಾಟರ್ ಕಂಪನಿಯ ವತಿಯಿಂದ ನೀಡಿದ ಗಾಳಿಯಿಂದ ನೀರು ಉತ್ಪಾದಿಸುವ ಯಂತ್ರವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳಾದ ಸುರೇಶ್ ಅಂಚನ್ ಮತ್ತು ಪ್ರತಾಪ್ ಕೋಟ್ಯಾನ್ ಉಪಸ್ಥಿತರಿದ್ದರು. ಯಂತ್ರವು ಪ್ರಕೃತಿಯ ಉಷ್ಣತೆಯನ್ನು ಶುದ್ಧ ಕುಡಿಯುವ ನೀರನ್ನಾಗಿ ಪರಿವರ್ತಿಸುವುದು ವಿಶೇಷವಾಗಿದೆ. ಇದೊಂದು ಅಂತಾರಾಷ್ಟ್ರೀಯ ಪೇಟೆಂಟ್ ಪಡೆದ ನೀರು ಉತ್ಪಾದನಾ ಕಂಪನಿಯಾಗಿದೆ. ಈ ಕಂಪನಿಯು ಅಮೆರಿಕೆಯಿಂದ 6 ಮತ್ತು ಭಾರತದೇಶದಿಂದ 3 ಪೇಟೆಂಟುಗಳನ್ನು ಹೊಂದಿದೆ. ದಿನಕ್ಕೆ […]