ಶ್ರೀ ಕೃಷ್ಣ ಮಠದಲ್ಲಿ ಯೋಗ-ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀ ಬಾಬಾ ರಾಮ್ ದೇವರವರ ನವೆಂಬರ್ 16 -20 ರ ತನಕ ನಡೆಯುವ ಉಚಿತ ಬ್ರಹತ್ ಯೋಗ ಶಿಬಿರದ ಪ್ರಯುಕ್ತ 101 ಯೋಗ ಶಿಬಿರಕ್ಕೆ ಹಾಗೂ ಸ್ವಚ್ಛಭಾರತ್ ಅಭಿಯಾನಕ್ಕೆ ಚಾಲನೆ ನೀಡಿದರು. ಪತಂಜಲಿ ರಾಜ್ಯ ಪ್ರಭಾರಿ ಯೋಗಾಚಾರ್ಯ ಭವರ್ಲಾಲ್ ಆರ್ಯಜೀ,ಬಾಲಾಜಿ ರಾಘವೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.