ಒಳ್ಳೆಯ ಕೆಲಸವನ್ನು ಹೊಗಳಲು ಸಿದ್ದರಾಮಯ್ಯನವರಿಗೆ ಮನಸ್ಸಿಲ್ಲ :ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಸಿಎಂ ಯಡಿಯೂರಪ್ಪನವರ ಕಾರ್ಯವೈಖರಿಯನ್ನು ಕಂಡು ಸಿದ್ದರಾಮಯ್ಯನವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರಿಗೆ ಒಳ್ಳೆಯ ಕೆಲಸವನ್ನು ಹೊಗಳಲು ಮನಸ್ಸಿಲ್ಲ. ಅದಕ್ಕೆ ಸಿಎಂ ಕಾರ್ಯವನ್ನು ಕಂಡು ಹೊಟ್ಟೆಕಿಚ್ಚಿನಿಂದ ಬಯ್ಯುತ್ತಿದ್ದಾರೆ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು. ಉಡುಪಿಯ ಜೀವನದಿ ಸ್ವರ್ಣ ನದಿಗೆ ಗುರುವಾರ ಬಾಗಿನ ಅರ್ಪಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ  ಮಾತನಾಡಿದ ಅವರು, ಸಿಎಂ ನೆರೆ ಸಂತ್ರಸ್ತರ ಸ್ಥಳಗಳಿಗೆ  ಓಡಾಡುತ್ತಿದ್ದು, ಪರಿಹಾರ ವಿತರಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ನೆರೆ ಸಂತ್ರಸ್ತರ ಅಳಲು ಕೇಳುತ್ತಿದ್ದಾರೆ. ಆದರೆ ನೆರೆ […]