ತೀವ್ರ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಕೋಟದ ಹುಡುಗನಿಗೆ ನೆರವಾಗಿ ಪ್ಲೀಸ್

ತನ್ನ ಮನೆಗೆ ಆಧಾರಸ್ತಂಭವಾಗಿದ್ದ ಕೋಟದ ಯುವಕನೋರ್ವ ಹೃದಯ ಖಾಯಿಲೆಯಿಂದ ಬಳಲುತ್ತಿದ್ದು  ಯುವಕನ ಚಿಕಿತ್ಸೆ ವೆಚ್ಚ ನೀಡಲಾಗದೇ ಕುಟುಂಬ ಕಂಗಾಲಾಗಿ ಕೂತಿದೆ. ಹೌದು ಮೂಲತ ಕೋಟದ ಕಲ್ಮಾಡಿ ನಿವಾಸಿ, ಪ್ರಸ್ತುತ ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿ ವಾಸವಿರುವ ಸುಜಾತ ಗಾಣಿಗ ಹಾಗೂ ಆರ್. ಹರಿ ದಂಪತಿಯ ಮಗ 21 ವರ್ಷದ ಸುರದ್ರೂಪಿ ಮಗ ಸಚಿನ್ ಹೃದಯ ಖಾಯಿಲೆಗೆ ತುತ್ತಾಗಿದ್ದಾರೆ. ಸಚಿನ್ ಅವರದ್ದು  ತೀರಾ ಬಡತನದ ಕುಟುಂಬ. ತಾಯಿ ಸುಜಾತ ಅವರು ಬಾಲ್ಯದಿಂದಲೂ ಮನೆಯ ಜವಬ್ದಾರಿಯನ್ನು ಹೊತ್ತು ಸುತ್ತಲಿನ ಮನೆಗಳಲ್ಲಿ ಮನೆಗೆಲಸ ಮಾಡಿ ತನ್ನೆರಡು […]