ಕೋಟ :ಬನ್ನಾಡಿ ಬಳಿ ಗದ್ದೆಗೆ ಹರಡಿತು ಬೆಂಕಿ:
ಉಡುಪಿ: ತರಗೆಲೆಗಳಿಗೆ ಕೊಟ್ಟ ಬೆಂಕಿ ಗದ್ದೆಗೆ ಹರಡಿ , ಸ್ಥಳೀಯರು ಬೆಂಕಿನಂದಿಸಲು ಹರಸಾಹಸ ಪಟ್ಟ ಘಟನೆ ಇಲ್ಲಿನ ಕೋಟದ ಬನ್ನಾಡಿ ದೊಡ್ಡ ಗರಡಿಯ ಬಳಿ ಭಾನುವಾರ ಸಂಭವಿಸಿದೆ. ಗದ್ದೆಯಲ್ಲಿರುವ ತರಗೆಲೆಗಳಿಗೆ ಸ್ಥಳೀಯರು ಬೆಂಕಿ ಕೊಟ್ಟಿದ್ದರು. ಆ ಬೆಂಕಿ ಅವರ ಗಮನಕ್ಕೆ ಬಾರದಂತೆ ಇಡೀ ಗದ್ದೆಗೆ ಹರಡಿ, ಸುತ್ತಲೂ ಆತಂಕ ಸೃಷ್ಟಿಸಿತು. ಸ್ಥಳೀಯ ಯುವಕರು ಬೆಂಕಿ ನಂದಿಸಲು ಹರಸಾಹಸಪಟ್ಟು ಕೊನೆಗೆ ಅಗ್ನಿಶಾಮಕ ದಳದ ಸಿಬಂಧಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಯಾವುದೇ ಹಾನಿಯಾಗಿಲ್ಲ. ಬೇಸಿಗೆಯಲ್ಲಿ ಈ ತರದ ಘಟನೆಗಳು ಕೆಲವೆಡೆ […]