ಕೋಟ: ಹಳೆಯ ವಿಡಿಯೋ ಶೇರ್ ಮಾಡಿ ಕೋಮು ಗಲಭೆಗೆ ಪ್ರಚೋದನೆ; ಮಾಜಿ ಜಿಪಂ ಸದಸ್ಯನ ಬಂಧನ

ಉಡುಪಿ: ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಕೋಮ ಸಂಘರ್ಷಕ್ಕೆ ಪ್ರಚೋದಿಸಿ, ಕೋಮು ಗಲಭೆ ಉಂಟು ಮಾಡಲು ಪ್ರೇರೆಪಿಸಿದ ಆರೋಪದಲ್ಲಿ ಓರ್ವ ಆರೋಪಿಯನ್ನು ಕೋಟ ಪೊಲೀಸರು ಮೇ 31ರಂದು ಬಂಧಿಸಿದ್ದಾರೆ. ಬಂಧಿತನನ್ನು ಉಡುಪಿ ಮಾಜಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಎಂದು ಗುರುತಿಸಲಾಗಿದೆ. ರಿಯಾಜ್ ಪರಂಗಿ ಪೇಟೆ ಎಂಬವರ ಹಳೆ ವಿಡಿಯೋವನ್ನು ಶೇರ್ ಮಾಡಿ(ಈಗಾಗಲೇ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ), ಸ್ಥಳೀಯ ಹಿಂದೂ ಯುವಕರನ್ನು ಕೋಮ […]