ಕೊಪ್ಪಳ ಜಿಲ್ಲಾ ಪಂಚಾಯಿತಿ IAS ಅಧಿಕಾರಿಯಿಂದ ಭತ್ತದ ಸಸಿ ನಾಟಿ: ರೈತರೊಂದಿಗೆ ಗದ್ದೆಗಿಳಿದ ಅಧಿಕಾರಿ
ಗಂಗಾವತಿ (ಕೊಪ್ಪಳ) :ರೈತರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅಧಿಕಾರಿ, ಹೊಲದಲ್ಲಿ ಟ್ರ್ಯಾಕ್ಟರ್ ಚಲಾಯಿಸಿದರು. ಇದಕ್ಕೂ ಮೊದಲು ಹೊಸಕೇರಿ ಗ್ರಾಮದ ಬೀಜ ಸಂಸ್ಕರಣಾ ಕೇಂದ್ರ, ಕೋಟಯ್ಯ ಕ್ಯಾಂಪಿನ ಅನ್ನಪೂರ್ಣ ಮಹಿಳಾ ಸಂಘದ ಕಿರು ಆಹಾರ ಉತ್ಪಾದನಾ ಘಟಕ ಹಾಗೂ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ರೈತ ಶೇಷಗಿರಿ ಅವರ ಹೊಲಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗದ್ದೆಗಿಳಿದು ಸಸಿ ನಾಟಿ ಮಾಡಿದ್ದ ವಿದ್ಯಾರ್ಥಿಗಳು : ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಶಾಲೆಯೊಂದರಲ್ಲಿ ಮಕ್ಕಳನ್ನು ಗದ್ದೆಗಿಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ […]