ಕೊಂಡಾಡಿ ಕೊರಗ ಕಾಲನಿ ಹಗರಣ: ಲೋಕಾಯುಕ್ತ ತನಿಖೆ
ಉಡುಪಿ: ಇಲ್ಲಿನ ಕೊರಗ ಬಾಂಧವರು ಕಳೆದ ೮ ವರ್ಷಗಳಿಂದ ನಿವೇಶನಕ್ಕಾಗಿ ಅಲೆದಾಡುತ್ತಿದ್ದಾರೆ. ರಾಜ್ಯ ಸರಕಾರವೇ ವಿತರಿಸಿದ ಹಕ್ಕುಪತ್ರಗಳಿದ್ದರೂ ಇವರಿಗೆ ನಿವೇಶನ ಸಿಕ್ಕಿಲ್ಲ. ಇವರ ಅಹವಾಲನ್ನು ಸ್ವೀಕರಿಸಿದ ರಾಜ್ಯ ಲೋಕಾಯುಕ್ತರು ಇದೀಗ ಉಡುಪಿ ಜಿಲ್ಲಾ ಗಿರಿಜನ ಯೋಜನಾ ಸಮನ್ವಯ ಅಧಿಕಾರಿಗೆ ನೋಟಿಸು ನೀಡುವ ಮೂಲಕ ಕೊಂಡಾಡಿ ಕೊರಗ ಕಾಲನಿ ಹಗರಣದ ತನಿಖೆ ಆರಂಭಿಸಿದ್ದಾರೆ. ನಿವೇಶನಕ್ಕಾಗಿ ಕಾಯುತ್ತಿದ್ದಾರೆ: ೨೦೧೦ರಲ್ಲೇ ಕೊರಗ ಸಮುದಾಯದವರಿಗಾಗಿ ಜಿಲ್ಲಾಡಳಿತದಿಂದ ಕಾಯ್ದಿರಿಸಲಾಗಿದ್ದ ಉಡುಪಿ ಜಿಲ್ಲೆಯ ಬೊಮ್ಮರಬೆಟ್ಟು ಗ್ರಾಮದ ೨೨೯ನೇ ಸರ್ವೇ ನಂಬ್ರದ ೨-೬೧ ಎಕ್ರೆ ಜಮೀನನ್ನು ನಿವೇಶನಗಳನ್ನಾಗಿ ವಿಂಗಡಿಸದೇ ಕರ್ತವ್ಯ […]
ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿ: ಎ.2 ರಿಂದ ಅಖಂಡ ಏಕಾಹ ಭಜನಾ ಮಂಗಲೋತ್ಸವ
ಉಡುಪಿ: ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿ ಭಜನೆ ಕಟ್ಟಿ ಹಿರಿಯಡ್ಕ ಇದರ 45ನೇ ವರ್ಷದ ಅಖಂಡ ಏಕಾಹ ಭಜನಾ ಮಂಗಲೋತ್ಸವ ಎ.2 ರಿಂದ ಎ.13 ರ ವರೆಗೆ ಶ್ರೀ ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಎ.2 ರಿಂದ ಸಾಯಂಕಾಲ ಗಂಟೆ 7:30 ರಿಂದ ನಿತ್ಯ ಭಜನೆ, ಎ.13 ರಂದು ಸೂರ್ಯೋದಯದಿಂದ ಏಕಾಹ ಭಜನೆ, ಮಧ್ಯಾಹ್ನ ಗಂಟೆ 12:30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಎ. 14 ರಂದು ಸೂರ್ಯೋದಯಕ್ಕೆ ಮಂಗಳೋತ್ಸವ, ಸಂಜೆ ಗಂಟೆ 7ಕ್ಕೆ ಮರು ಭಜನೆ […]