ಒಂದೇ ವಾರದಲ್ಲಿ ಕುಸಿತ ಕಂಡ ಟೊಮೆಟೋ ದರ!

ಕೋಲಾರ: ಮಳೆ, ಮೋಡ ಕವಿದ ವಾತಾವರಣ ಮತ್ತು ರೋಗಬಾಧೆಯಿಂದ ಗುಣಮಟ್ಟ ಕಳೆದುಕೊಳ್ಳುತ್ತಿರುವ ಟೊಮೆಟೊ ಧಾರಣೆ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದೆ. ವಾರದ ಹಿಂದೆ ಕೋಲಾರ ಎಪಿಎಂಸಿ ಹರಾಜಿನಲ್ಲಿ ₹750ಕ್ಕೆ ಮಾರಾಟವಾಗಿದ್ದ 15 ಕೆ.ಜಿ ಟೊಮೆಟೊ ಬಾಕ್ಸ್ ಈಗ ₹300ಕ್ಕೆ ಕುಸಿದಿದೆ. ಗುಣಮಟ್ಟದ ಟೊಮೆಟೊ ಬಾಕ್ಸ್‌ಗೆ ಮಾತ್ರ ₹300 ಇದ್ದರೆ, ಇನ್ನುಳಿದ ಟೊಮೆಟೊ ಬಾಕ್ಸ್‌ಗಳು ಕೇವಲ ₹100ಕ್ಕೆ ಮಾರಾಟವಾಗುತ್ತಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊ ಬೆಲೆ ₹15ರಿಂದ ₹20 ಇದೆ. ಹೆಚ್ಚು ಟೊಮೆಟೊ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಸುಗ್ಗಿ […]