ವಿಶ್ವ ಥಲಸ್ಸೆಮಿಯಾ ದಿನದ ಅಂಗವಾಗಿ ಕೆ.ಎಂಸಿಯಲ್ಲಿ ಎಚ್ಎಲ್ಎ ಪರೀಕ್ಷಾ ಶಿಬಿರ

ಮಣಿಪಾಲ: ಜಾಗತಿಕವಾಗಿ ಥಲಸ್ಸೆಮಿಯಾ ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಮತ್ತು ಥಲಸ್ಸೆಮಿಯಾ ಪೀಡಿತ ಮಕ್ಕಳಿಗೆ ತಮ್ಮ ಆರೈಕೆದಾರರಿಗೆ ಬೆಂಬಲ ವ್ಯಕ್ತಪಡಿಸಲು ಪ್ರತಿ ವರ್ಷ ವಿಶ್ವ ಥಲಸ್ಸೆಮಿಯಾ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ ‘”ಎಚ್ಚರಿಕೆಯಿಂದಿರಿ, ಹಂಚಿಕೊಳ್ಳಿ ಕಾಳಜಿ: ಥಲಸ್ಸೆಮಿಯಾ ಕುರಿತು ಆರೈಕೆಯ ಅಂತರವನ್ನು ತಗ್ಗಿಸಲು ಶಿಕ್ಷಣವನ್ನು ಬಲಪಡಿಸುವುದು”. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗವು ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಡಿಕೆಎಂಎಸ್ ಸಹಕಾರದೊಂದಿಗೆ ಎಚ್‌ಎಲ್‌ಎ ಪರೀಕ್ಷಾ ಶಿಬಿರವನ್ನು ನಡೆಸಿತು. ಶಿಬಿರದಲ್ಲಿ ರೋಗಿಗಳು ಮತ್ತು ಸಂಭಾವ್ಯ […]
ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ ರಾಷ್ಟ್ರ ಮಟ್ಟದ ಸಮ್ಮೇಳನ-ಮ್ಯಾಸೊಕಾನ್ 2023

ಮಣಿಪಾಲ: ಮಣಿಪಾಲ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ ಮ್ಯಾಸೊಕಾನ್ 2023 ಅನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗವು ಮೇ 12 ಮತ್ತು 13 ರಂದು ಕೆಎಂಸಿ ಮಣಿಪಾಲದ ಡಾ ಟಿಎಂಎ ಪೈ ಆಡಿಟೋರಿಯಂನಲ್ಲಿ ಆಯೋಜಿಸಿದ್ದು, ಈ ಸಮ್ಮೇಳನದಲ್ಲಿ 150 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಭಾರತದಾದ್ಯಂತ ವಿವಿಧ ಆಂಕೊಲಾಜಿ ಮತ್ತು ಶಸ್ತ್ರಚಿಕಿತ್ಸಾ ವಿಭಾಗಗಳಿಂದ ಸಮ್ಮೇಳನಕ್ಕೆ ಆಗಮಿಸಿದ್ದರು. ಸಮ್ಮೇಳನವನ್ನು ಯೆನೆಪೊಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿಜಯ್ ಕುಮಾರ್ ಎಂ. […]
ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಅಂಗದಾನ: 7 ರೋಗಿಗಳಿಗೆ ಜೀವದಾನ

ಮಣಿಪಾಲ: 21 ವರ್ಷದ ಉಲ್ಲಾಸ್ ಆರ್ ಎಂಬವರಿಗೆ ಏ. 22 ರಂದು ಭದ್ರಾವತಿ ತಾಲೂಕಿನ ಚೆನ್ನಗಿರಿಯಲ್ಲಿ ರಸ್ತೆ ಅಪಘಾತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಏ.23 ರಂದು ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭದ್ರಾವತಿ ತಾಲೂಕಿನ ಕೆಂಚನಹಳ್ಳಿ ಗ್ರಾಮ, ನೀರಗುಂಡಿ ಅಂಚೆಯ ರಾಜಪ್ಪ ಇವರ ಮಗನಾದ ಉಲ್ಲಾಸ್ ಅಪಘಾತದ ಪರಿಣಾಮದಿಂದ ತೀವ್ರವಾಗಿ ಗಾಯಗೊಂಡಿದ್ದು, ವೈದ್ಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ಉಲ್ಲಾಸ್ ಅವರನ್ನು ಎರಡು ಬಾರಿ […]
ಮಣಿಪಾಲ: ವಿಶ್ವ ಆರೋಗ್ಯ ದಿನ ನಿಮಿತ್ತ ಆರೋಗ್ಯ ಜಾಗೃತಿ ಅರಿವಿಗಾಗಿ ಶಿಲ್ಪ ಅನಾವರಣ

ಮಣಿಪಾಲ: ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನಾಗಿ ವಿಶ್ವದ್ಯಾಂತ ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಉತ್ತಮ ಆರೋಗ್ಯದ ಕುರಿತು ಅರಿವು ಮೂಡಿಸುವುದಾಗಿದೆ. ಮೊದಲು ಸೋಂಕು ಕಾಯಿಲೆಗಳು ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇತ್ತು. ಆದರೀಗ ಅಸಾಂಕ್ರಾಮಿಕ ಮತ್ತು ಜೀವನ ಶೈಲಿಯಿಂದ ಬರುವ ಕಾಯಿಲೆಗಳು, ಮಧುಮೇಹ, ಹೃದ್ರೋಗ, ಕಿಡ್ನಿ ಇತ್ಯಾದಿಗಳ ತಡೆಗಟ್ಟುವ ಮಾಹಿತಿ ಮತ್ತು ಅರಿವು ಮೂಡಿಸುವ ಅವಶ್ಯಕತೆ ಇದೆ. ಇಂತಹ ಕಾರ್ಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು […]
ಅಪರೂಪದ ಬಾಂಬೆ ನೆಗೆಟಿವ್ ರಕ್ತದ ಗುಂಪಿನ ಗರ್ಭಿಣಿಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಕೆ.ಎಂ.ಸಿ

ಮಣಿಪಾಲ: ರಕ್ತದ ಗುಂಪು O ನೆಗೆಟಿವ್ ಆಗಿದ್ದು ಹಾಗೂ ಆಂಟಿಬಾಡಿ ಇದೆಯೆಂದು ಮುಂದಿನ ನಿರ್ವಹಣೆಗಾಗಿ ಗರ್ಭಿಣಿ ಮಹಿಳೆಯನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಕಳುಹಿಸಲಾಗಿದ್ದು ಇಲ್ಲಿನ ರಕ್ತ ಕೇಂದ್ರದಲ್ಲಿ ಪರೀಕ್ಷೆ ಮಾಡಿದಾಗ ಮಹಿಳೆಗೆ ಅತ್ಯಂತ ಅಪರೂಪದ ಬಾಂಬೆ ನೆಗೆಟಿವ್ ರಕ್ತದ ಗುಂಪು ಇರುವುದು ಕಂಡುಬಂದಿತು. ಇಂತಹ ಸಂದರ್ಭದಲ್ಲಿ ಆಂಟಿ ‘ಡಿ’ ಆಂಟಿಬಾಡಿ ಇರುವಿಕೆಯನ್ನುಪರೀಕ್ಷೆ ಮಾಡಲು ತುಂಬಾ ಕಷ್ಟ. ರಕ್ತದ ಉನ್ನತ ಮಟ್ಟದ ಇಮ್ಮುನೊಹೆಮಟಾಲೋಜಿ ಪರೀಕ್ಷೆಯ ಮೂಲಕ ಆಂಟಿ ‘ಡಿ’ ಆಂಟಿಬಾಡಿ ಇಲ್ಲವೆಂದು ಸಾಬೀತುಪಡಿಸಲಾಯಿತು. ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದ […]